ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿಗಳಿಗೆ ಸಾಗುವಾಣಿ ಮರದ ಸ್ಟ್ಯಾಂಡ್ ಅನ್ನು ಕೊಯಿಲತ್ತಡ್ಕ ನಾರಾಯಣ ಆಚಾರ್ಯ ದಂಪತಿ ಸಮರ್ಪಣೆ ಮಾಡಿದರು.
ಸುಮಾರು 50 ಸಾವಿರ ಮೌಲ್ಯದ ಸಾಗುವಾಣಿ ಮರದ 5 ಕಾಣಿಕೆ ಡಬ್ಬಿ ಸ್ಟ್ಯಾಂಡ್ ಗಳನ್ನು ನೀಡಿದ್ದಾರೆ. ನಾರಾಯಣ ಆಚಾರ್ಯ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಭಟ್ ಪಂಜಿಗುಡ್ಡೆಯವರು ಗೌರವಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.