ಪಡುಮಲೆಗೆ ಬಂಟ್ವಾಳ ಶಾಸಕ ರಾಜೇಶ್ ನೖಾಕ್ ಭೇಟಿ 

0

ಬಡಗನ್ನೂರು: ಐತಿಹಾಸಿಕ ಪಡುಮಲೆ ಅವಳಿ ವೀರಪುರುಷರಾದ ಶ್ರೀ ಕೋಟಿ ಚೆನ್ನಯರ ಹುಟ್ಟೂರಿಗೆ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನೖಾಕ್ ಅ.17 ರಂದು ಭೇಟಿ ನೀಡಿ ಪಡುಮಲೆ ಎರುಕೊಟ್ಯಾ ಶ್ರೀ ನಾಗಬಿರ್ಮೆರ್ ಕ್ಷೇತ್ರ ಶ್ರೀ, ನಾಗಬೆರ್ಮೆರ ದೇವರಿಗೆ ಸಂಕ್ರಮಣ ವಿಶೇಷ ತಂಬಿಲ ಸೇವೆ , ಮತ್ತು ದೖೆಯಿಬೖೆದಿತಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.ಬಳಿಕ ಶಾಸಕರು ಶ್ರೀ ದೖೆಯಿಬೖೆದಿತಿ, ಸಮಾಧಿ ದರ್ಶನ ಪಡೆದು ಬಳಿಕ ಬಲ್ಲಾಳರ ಕಾಲದ ಸುಮಾರು ಐವನ್ನೂರು ವರ್ಷ ಪುರಾತನ  ನ್ಯಾಯ ತಿರ್ಮಾನ ಧರ್ಮ ಚಾವಡಿ, 12 ಮುಡಿ ಕಂಬಳ ಗದ್ದೆ ವೀಕ್ಷಣೆ ಮಾಡಿದರು. ಪಡುಮಲೆ ಮದಕ ರಾಜರಾಜೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ  ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಪಡುಮಲೆ ಶ್ರೀ ಕೋಟಿ ಚೆನ್ನಯ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಕಾರ್ಯದರ್ಶಿ ಸತೀಶ್ ಪಟ್ಲ ಪುತ್ತೂರು ಚರಣ್ ಕೆ ಟ್ರಸ್ಟಿ  ರತ್ನಾಕರ ಜೈನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್. ಸಿ ನಾರಾಯಣ ರೆಂಜ, ಪುತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ  ಮಣಿಕಂಠ , ನಗರ ವಲಯ ಕಾರ್ಯದರ್ಶಿ ಶ್ರೀಧರ ನಾಯಕ್, ನಗರ ಮಂಡಲ ಆಧ್ಯಕ ಶಿವಕುಮಾರ್ ಪಿ. ಬಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರಿಮಾರು ರತನ್ ಶೆಟ್ಟಿ ಮೇನಾಲ,, ಬಡಗನ್ನೂರು ಗ್ರಾ. ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಸದಸ್ಯರಾದ ಸಂತೋಷ ಆಳ್  ಗಿರಿಮನೆ, ವೆಂಕಟೇಶ್ ಕನ್ನಡ್ಕ, ಶಿವಕುಮಾರ್ ಮೋಡಿಕೆ  ಜಯರಾಮ ಮುಗೇರ ಆನಂತಾಡಿ, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here