ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಇಕೋ ಮತ್ತು ಹೆಲ್ತ್ ಕ್ಲಬ್ ನಿಂದ ಯೋಗದ ಮುಖಾಂತರ ಒತ್ತಡ ನಿರ್ವಹಣೆ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಇಕೋ ಮತ್ತು ಹೆಲ್ತ್ ಕ್ಲಬ್ ವತಿಯಿಂದ ಯೋಗದ ಮುಖಾಂತರ ಒತ್ತಡ ನಿರ್ವಹಣೆ ಕುರಿತಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಮಾತನಾಡಿ “ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಪ್ರಮುಖವಾದ ಅಂಶವಾಗಿದೆ. ಇದು ದೇಹದ ಶಕ್ತಿ ಸಮತೋಲನ ಮತ್ತು ಪರಿಚಲನೆಯನ್ನು ಸುಗಮಗೊಳಿಸುವ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಏಕಾಗ್ರತೆ ಮತ್ತು ದೇಹದ ಯೋಗ ಕ್ಷೇಮವನ್ನು ಕಾಪಾಡುತ್ತದೆ. ಆಧುನಿಕ ಕಾಲದ ಬದಲಾದ ಜೀವನ ಶೈಲಿ ಹಾಗೂ ಆರೋಗ್ಯ ಪದ್ಧತಿಗಳಿಂದಾಗಿ ದೇಹವು ಹಲವು ರೋಗಗಳಿಗೆ ತುತ್ತಾಗುವುದು ಸಹಜ. ಯೋಗವನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಲ್ಲಿ ದೀರ್ಘಕಾಲದ ರೋಗಗಳಿಂದ ಮುಕ್ತಿ ಸಿಗುವುದು ಖಂಡಿತ.” ಎಂದು ಹೇಳಿದರು.


ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಾದ ದಿವ್ಯ.ಜಿ. ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಮೋಕ್ಷಿತ ಪ್ರಾರ್ಥಿಸಿ, ಅನಿ? ಧನ್ಯವಾದವನ್ನು ಇತ್ತರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ಇಕೋ ಕ್ಲಬ್ ಸಂಯೋಜಕರಾದ ಅನುಪಮ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here