ಅಧ್ಯಕ್ಷ; ಕಮಾಲ್ ಕೆ.ಕೆ., ಪ್ರಧಾನ ಕಾರ್ಯದರ್ಶಿ; ಅಬ್ದುಲ್ ಅಜೀಜ್
ಉಪ್ಪಿನಂಗಡಿ: ಕುತುಬಿಯಾ ಜಮಾಹತ್ ಗಂಡಿಬಾಗಿಲು ಇದರ ಅಂಗಸಂಸ್ಥೆಯಾದ ಹಿದಾಯತುಲ್ ಇಸ್ಲಾಮ್ ಮದರಸ ಶಕ್ತಿನಗರ ಕೆಮ್ಮಾರ ಇದರ ಮಹಾಸಭೆ ಅ.17ರಂದು ಗೌರವಾಧ್ಯಕ್ಷ ಹಸೈನಾರ್ ಹಾಜಿಯವರ ಅಧ್ಯಕ್ಷತೆಯಲ್ಲಿ ಮದರಸ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಕಮಾಲ್ ಕೆ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಜಿ.ಅಬ್ದುಲ್ ಅಜೀಜ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಇಸಾಕ್ ಎನ್.ಎ., ಇಬ್ರಾಹಿಂ ಬಡಿಲ, ಜೊತೆ ಕಾರ್ಯದರ್ಶಿಗಳಾಗಿ ಮುಸ್ತಫಾ ಪೂರಿಂಗ, ಜಲೀಲ್ ಎನ್.ಎ., ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಬಡ್ಡಮೆ, ಮೇಲುಸ್ತುವಾರಿಗಳಾಗಿ ಜಲೀಲ್ ಕೆ.ಕೆ., ಇಕ್ಬಾಲ್ ಜಿ, ಲೆಕ್ಕಪರಿಶೋಧಕರಾಗಿ ಖಲಂದರ್ ಎಸ್.ಪಿ., ಸದಸ್ಯರಾಗಿ ಜುನೈದ್ ಗೋಳಿತ್ತಡಿ, ಅಝೀಝ್ ಕೆ.ಕೆ., ರಿಯಾಝ್ ಕೆ., ಶರೀಪ್ ಎನ್.ಎ., ಅಶ್ರಫ್ ಅಳಕೆ ಆಯ್ಕೆಯಾದರು.