ಅಕ್ಷಯ ಕಾಲೇಜಿನಲ್ಲಿ ಸಂಸ್ಕೃತ- “ವಾಗ್ ವೈಭವ ”   

0

ಪುತ್ತೂರು :ಅಕ್ಷಯ   ಸಮೂಹ ವಿದ್ಯಾಸಂಸ್ಥೆಗಳ ಪದವಿ ಕಾಲೇಜಿನಲ್ಲಿ ಸಂಸ್ಕೃತ ವಿಭಾಗವು ಐಕ್ಯೂಎಸಿ  ಯ  ಸಹಯೋಗದಲ್ಲಿ “ವಾಗ್ ವೈಭವ”ಸಂಸ್ಕೃತ ಸಂಘದ ಉದ್ಘಾಟನಾ   ಕಾರ್ಯಕ್ರಮ  ಆಯೋಜಿಸಿತು.      

ಕಾರ್ಯಕ್ರಮವನ್ನು ಶಶಿಕಲಾ ವೋರ್ಕಡಿ  ಉದ್ಘಾಟಿಸಿ,ಭಗವದ್ಗೀತೆ ಮತ್ತು  ಅದರ   ಸಂದೇಶ ಮನುಷ್ಯನ ಜೀವನದಲ್ಲಿ  ಅಗಾಧವಾದ  ಪರಿಣಾಮ ಬೀರುತ್ತದೆ .ಹಲವಾರು ಶ್ಲೋಕಗಳು ಸಂಸ್ಕೃತ ಭಾಷೆಯಿಂದಲೇ   ಬಂದಿರುತ್ತದೆ   ಮಾತ್ರವಲ್ಲ  ಶ್ಲೋಕಗಳು ಆದರ್ಶ ಜೀವನದ ಶೈಲಿಯ ಬಗೆಗಿನ ವಿವರಣೆಯನ್ನು ತಿಳಿಸುತ್ತದೆ. ಮಹಾ ಗ್ರಂಥಗಳಾದ ರಾಮಾಯಣ, ಮಹಾಭಾರತ  ಸಂಸ್ಕೃತದಲ್ಲಿ ರಚಿತವಾಗಿದೆ. ಅನೇಕ ಶಬ್ದಗಳು ಸಂಸ್ಕೃತ ಪದದಿಂದ ಉತ್ಪತ್ತಿಯಾಗಿದೆ ಮಾತ್ರವಲ್ಲ  ವಿದೇಶಿಗರು  ಭಾಷೆಯ  ಪರಂಪರೆಯ ಬಗ್ಗೆ ತಿಳಿಯಲು ಆಸಕ್ತಿ ಹೊಂದಿದ್ದಾರೆ ಆದರೆ ಭಾರತೀಯರು ಆಸಕ್ತಿ ಬೆಳೆಸುವುದಿಲ್ಲ ಎನ್ನುವ ವಿಚಾರ ವಿಪರ್ಯಾಸ  ಮತ್ತು ದುರದೃಷ್ಟಕರ .ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು   ಆಸಕ್ತಿಯಿಂದ  ಭಾರತದ  ಭವ್ಯ  ಪರಂಪರೆಯನ್ನು ಸಾರುವ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು  ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ  ರಕ್ಷಣ್. ಟಿ. ಆರ್  ಸಂಸ್ಕೃತ ಸಂಘದ “ವಾಗ್ ವೈಭವ”ವು  ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಮೂಲಕ  ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಟಿಕೋನವನ್ನು  ಸೃಷ್ಟಿಸಬಲ್ಲದು. ವಿದ್ಯಾರ್ಥಿಗಳು ಮೌಲ್ಯಾಧಾರಿತ ಜೀವನ ವನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಂಸ್ಕೃತ ಸಂಘದ ಸಂಚಾಲಕರಾದ ಸಾಯಿಕೃಪ .ಕೆ  ಪ್ರಾಸ್ತಾವಿಕ  ವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿಐಕ್ಯೂಎಸಿ ಸಂಯೋಜಕಿ ರಶ್ಮಿ . ಕೆ  ಉಪಸ್ಥಿತರಿದ್ದರು. ಸಂಸ್ಕೃತ ಸಂಘದ ವಿದ್ಯಾರ್ಥಿಳಾದ ದೀಪ್ತಿ.ಕೆ,ಯಶಸ್ವಿ.ಬಿ.ಕೆ,ನವ್ಯ ಪ್ರಾರ್ಥಿಸಿದರು.ಕುಮಾರಿ ರಕ್ಷಾ.ಕೆ.ಆರ್ ಉದ್ಘಾಟನ ಹಾಗೂ ಸಮಾರೋಪ ಕಾರ್ಯಕ್ರಮವನ್ನು ನಿರೂಪಿಸಿದರು. ಅಪೇಕ್ಷಾ. ಕೆ. ಜೆ. ಶೆಟ್ಟಿ ಉದ್ಘಾಟಕರ ಪರಿಚಯವನ್ನು ಮಾಡಿದರು.ಅಕ್ಷಿತ್. ಕೆ. ಆರ್ ಸಂಘದ  ಅಧ್ಯಕ್ಷ  ಸ್ವಾಗತಿಸಿ, ಕುಮಾರಿ ರಶ್ಮಿ ರಾವ್  ವಂದಿಸಿದರು.

LEAVE A REPLY

Please enter your comment!
Please enter your name here