ರೋಟರಿ ಸದಸ್ಯರಲ್ಲಿನ ಪ್ರಾವೀಣ್ಯತೆ, ಪ್ರತಿಭೆ ತೋರ್ಪಡಿಸಲು ವೇದಿಕೆ-ಜಯಂತ್ ನಡುಬೈಲು
ಸ್ನೇಹತ್ವ, ಒಡನಾಟದಿಂದ ಸಾಂಸ್ಕೃತಿಕ ಸ್ಪರ್ಧೆಗೆ ಮೆರುಗು-ಪ್ರಮೀಳಾ ರಾವ್
ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ “ತಕಧಿಮಿತ” ಕಾರ್ಯಕ್ರಮವು ಅ.19 ರಂದು ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಜರಗಿತು.
ಉದ್ಘಾಟನೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಜಯಂತ್ ನಡುಬೈಲುರವರು ನೆರವೇರಿಸಿ ಮಾತನಾಡಿ, ರೋಟರಿ ಈಸ್ಟ್ ಕ್ಲಬ್ ಅಕ್ಷಯ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಇಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ ಮಾತ್ರವಲ್ಲ ರೋಟರಿ ಸದಸ್ಯರ ಕುಟುಂಬ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ. ರೋಟರಿ ಸದಸ್ಯರಲ್ಲಿನ ಪ್ರಾವೀಣ್ಯತೆ, ಪ್ರತಿಭೆಯನ್ನು ತೋರ್ಪಡಿಸಲು ರೋಟರಿ ಈಸ್ಟ್ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಸಮಾಜಸೇವೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ರೋಟರಿ ಸಂಸ್ಥೆ ಸಾಂಸ್ಕೃತಿಕ ವಿಭಾಗದಲ್ಲೂ ಕೈಜೋಡಿಸಿದೆ ಎಂದರು.
ಸ್ನೇಹತ್ವ, ಒಡನಾಟದಿಂದ ಸಾಂಸ್ಕೃತಿಕ ಸ್ಪರ್ಧೆಗೆ ಮೆರುಗು-ಪ್ರಮೀಳಾ ರಾವ್:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಮಾತನಾಡಿ, ರೋಟರಿ ಧ್ಯೇಯವಾಗಿರುವ ಸ್ನೇಹತ್ವ ಹಾಗೂ ಒಡನಾಟದ ಮೂಲಕ ಸಾಂಸ್ಕೃತಿಕ ಸ್ಪರ್ಧೆಯ ಮೆರುಗು ಹೆಚ್ಚಿಸಲಿದೆ. ಬಹುಮಾನ ಗಳಿಸುವುದು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಭಾಗವಹಿಸುವ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸುವಂತಾಗಲಿ ಎಂದರು.
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ವಹಿಸಿದ್ದರು. ರೋಟರಿ ಈಸ್ಟ್ ಪೂರ್ವಾಧ್ಯಕ್ಷ ಡಾ.ಸೂರ್ಯನಾರಾಯಣ, ರೋಟರಿ ವಲಯ ಐದರ ವಲಯ ಸೇನಾನಿ ಭರತ್ ಪೈ, ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ರೋಟರಿ ವಲಯ ಸಾಂಸ್ಕೃತಿಕ ಸಂಯೋಜಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಈಸ್ಟ್ ನಿಕಟಪೂರ್ವ ಕಾರ್ಯದರ್ಶಿ ರವಿಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
11 ರೋಟರಿ ಕ್ಲಬ್ ಗಳು ಭಾಗಿ…
ರೋಟರಿ ಜಿಲ್ಲೆ 3181, ವಲಯ ಐದರ ವ್ಯಾಪ್ತಿಗೊಳಪಟ್ಡ ರೋಟರಿ ಕ್ಲಬ್ ಗಳಾದ ಪುತ್ತೂರು ಯುವ, ರೋಟರಿ ಪುತ್ತೂರು, ರೋಟರಿ ಸೆಂಟ್ರಲ್, ಪುತ್ತೂರು ಎಲೈಟ್, ಪುತ್ತೂರು ಸ್ವರ್ಣ, ರೋಟರಿ ಬೆಳ್ಳಾರೆ, ರೋಟರಿ ಕಡಬ, ರೋಟರಿ ವಿಟ್ಲ ಸೇರಿದಂತೆ ಹನ್ನೊಂದು ಕ್ಲಬ್ ಗಳು ಭಾಗವಹಿಸಿತ್ತು.
ವಿವಿಧ ಸ್ಪರ್ಧೆಗಳು..
ಏಕವ್ಯಕ್ತಿ ಗಾಯನ, *ಡ್ಯುಯೆಟ್ ಗಾಯನ, *ಸ್ಟ್ಯಾಂಡ್ ಅಪ್ ಕಾಮಿಡಿ, *ಸಮೂಹ ಗಾಯನ, *ಸ್ಕಿಟ್, ಸೋಲೊ ನೃತ್ಯ, *ಸಮೂಹ ನೃತ್ಯ