ಕುಂಬ್ರ ಅತಿಥಿಯಲ್ಲಿ ದೀಪಾವಳಿ ಬಿಗ್ ಸೇಲ್, ಆಫರ್‌ಗಳ ಉತ್ಸವ

0

ಹಿಂದೆಂದೂ ಕಂಡಿರದ ಭಾರೀ ರಿಯಾಯಿತಿ
ಖರೀದಿಸಿ ಆಕರ್ಷಕ ಬಹುಮಾನ ಗೆಲ್ಲಿರಿ

ಪುತ್ತೂರು: ಸೇಲ್ಸ್ ಮತ್ತು ಸರ್ವೀಸ್‌ನಲ್ಲಿ ಹತ್ತೂರಿನಲ್ಲೂ ತನ್ನದೇ ಗ್ರಾಹಕ ಬಳಗವನ್ನು ಹೊಂದಿರುವ ಗ್ರಾಮೀಣ ಭಾಗದ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್‌ನ ನಂಬರ್ 1 ಶೋರೂಮ್ ಎಂದೇ ಕರೆಸಿಕೊಂಡಿರುವ ಕಳೆದ 13 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಾ ಬಂದಿರುವ ಕುಂಬ್ರದ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್ ಶೋರೂಮ್‌ನಲ್ಲಿ ಈ ವರ್ಷದ ದೀಪಾವಳಿ ಬಿಗ್ ಸೇಲ್ ಆರಂಭಗೊಂಡಿದೆ.

ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆಯಾಗಿರುವ ಅತಿಥಿಯಿಂದ ನೀವು ಖರೀದಿಸುವ ಪ್ರತಿಯೊಂದು ವಸ್ತುಗಳ ಮೇಲೆ ಹಿಂದೆಂದೂ ಕಂಡಿರದ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅದಲ್ಲದೆ ನೀವು ಖರೀದಿಸಿದ ವಸ್ತುಗಳ ಆಧಾರದ ಮೇಲೆ ಸ್ಪಿನ್ ಆಂಡ್ ವಿನ್ ಮೂಲಕ ಅತ್ಯಾರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಇದಲ್ಲದೆ ಹತ್ತು ಹಲವು ಆಫರ್‌ಗಳು ಈ ದೀಪಾವಳಿಗೆ ನಿಮಗಾಗಿ ಕಾದಿದೆ. ಹಾಗಾದರೆ ತಡ ಯಾಕೆ ಇಂದೆ ಕುಂಬ್ರದ ಹೃದಯ ಭಾಗದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿಗೆ ಬನ್ನಿ ನಿಮ್ಮಿಷ್ಠದ ಅತಿಥಿಯೊಂದಿಗೆ ಈ ದೀಪಾವಳಿಯನ್ನು ಸಂಭ್ರಮಿಸಿ…


ಖರೀದಿಸಿ ಸ್ಥಳದಲ್ಲೇ ಬಹುಮಾನ ಗೆಲ್ಲಿರಿ…
ಅತಿಥಿ ಈ ಒಂದು ವಿಷಯದಿಂದಲೇ ಎಲ್ಲರ ಮನೆ ಮಾತಾಗಿರುವುದು ನೀವು ಅತಿಥಿಯಿಂದ ಯಾವುದಾದರೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರೆ ನಿಮಗೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶ ಇಲ್ಲಿದೆ. ಇಲೆಕ್ಟ್ರಾನಿಕ್ಸ್ ಅಥವಾ ಫರ್ನಿಚರ್‍ಸ್ ಐಟಂಗಳನ್ನು ಖರೀದಿಸಿದರೆ ನಿಮಗೆ ಸ್ಪಿನ್ ಮಾಡಿ ವಿನ್ ಆಗುವ ಛಾನ್ಸ್ ಇದೆ. ಇದರಲ್ಲಿ ಐರನ್ ಬಾಕ್ಸ್, ಕೆಟಲ್, 1 ಸಾವಿರ ನಗದು ಬಹುಮಾನ ಸೇರಿದಂತೆ ಅತ್ಯಾರ್ಷಕ ಬಹುಮಾನಗಳು ಒಳಗೊಂಡಿದೆ. ನೀವು 10 ಸಾವಿರದ ಐಟಂವೊಂದನ್ನು ಖರೀದಿಸಿ ಬಳಿಕ ಸ್ಪಿನ್ ಮಾಡಿ 1 ಸಾವಿರ ನಗದು ಕೂಡ ವಿನ್ ಆಗುವ ಸಾಧ್ಯತೆ ಇದೆ. ಈ ಕೊಡುಗೆ ದೀಪಾವಳಿಗೆ ಮಾತ್ರ ಅತಿಥಿಯಲ್ಲಿ ಲಭ್ಯವಿದೆ.


ಮೊಬೈಲ್ ಖರೀದಿಸಿ 6 ಸಾವಿರ ತನಕ ರಿಯಾಯಿತಿ ಪಡೆಯಿರಿ…
ಸ್ಮಾರ್ಟ್ ಯುಗದಲ್ಲಿ ಮೊಬೈಲ್‌ಗಳು ಕೂಡ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಾ ಹೋಗುತ್ತಿವೆ. 5ಜಿ ಈ ಕಾಲದಲ್ಲಿ ಅತ್ಯಾರ್ಷಕ ಫ್ಯೂಚರ್‍ಸ್‌ಗಳನ್ನು ಹೊಂದಿರುವ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಮೊಬೈಲ್ ಫೋನ್‌ಗಳು ಅತಿಥಿಯಲ್ಲಿ ಲಭ್ಯವಿದೆ. ಇದೀಗ ಮೊಬೈಲ್‌ಗಳ ವಾರಂಟಿಯನ್ನು 1.5 ವರ್ಷಕ್ಕೆ ಹೆಚ್ಚಿಸಲಾಗಿದ್ದು, 6 ತಿಂಗಳುಗಳ ಹೆಚ್ಚಿಗೆ ವಾರಂಟಿಯನ್ನು ಪಡೆಯಬಹುದಾಗಿದೆ. ನೀವು ಅತಿಥಿಯಿಂದ ಮೊಬೈಲ್ ಖರೀದಿಸಿದರೆ ನಿಮಗೆ 1 ಸಾವಿರದಿಂದ 6 ಸಾವಿರ ರೂಪಾಯಿ ತನಕ ರಿಯಾಯಿತಿಯನ್ನು ಪಡೆಯುವ ಅವಕಾಶವಿದೆ. ಇದಲ್ಲದೆ ಮೊಬೈಲ್ ಆಕ್ಸಸಸ್‌ರೀಸ್‌ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.


ಜಿಎಸ್‌ಟಿಯಲ್ಲಿ ಕಡಿತ ಟಿವಿ, ಇನ್‌ವರ್ಟರ್,ಕುಕ್ಕರ್ ಬೆಲೆ ಕುಸಿತ
ಕೇಂದ್ರ ಸರಕಾರವು ಜಿಎಸ್‌ಟಿಯಲ್ಲಿ ಶೇ.೧೦ ಕಡಿತಗೊಳಿಸಿರುವುದರಿಂದ ಕೆಲವೊಂದು ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ಬೆಲೆ ಇಳಿಕೆಯಾಗಿದೆ. ಟಿವಿ,ಇನ್‌ವರ್ಟರ್, ಕುಕ್ಕರ್, ನಾನ್‌ಸ್ಟಿಕ್ ಐಟಂಗಳ ಮೇಲೆ ಬೆಲೆ ಇಳಿಕೆಯಾಗಿದ್ದು ಅತೀ ಕಡಿಮೆ ಬೆಲೆಯಲ್ಲಿ ಈ ವಸ್ತುಗಳ ಖರೀದಿಸುವ ಅವಕಾಶವಿದೆ. ಎಲ್ಲಾ ಕಂಪೆನಿಗಳ ಟಿವಿಗಳು ಅತಿಥಿಯಲ್ಲಿ ಲಭ್ಯವಿದೆ. ಪದೇ ಪದೇ ವಿದ್ಯುತ್ ಕೈಕೊಡುವುದನ್ನು ತಪ್ಪಿಸಲು ಈ ದೀಪಾವಳಿಗೆ ಇನ್‌ವರ್ಟರ್ ಹಾಕಿಸುವ ಮೂಲಕ ಮನೆಯನ್ನು ಸದಾ ಬೆಳಗಿಸಿ…


ಫರ್ನಿಚರ್‍ಸ್‌ಗಳ ಮೇಲೆ ಶೇ.10ರಿಂದ 40% ರಿಯಾಯಿತಿ…
ಫರ್ನಿಚರ್‍ಸ್‌ಗಳ ವಿಷಯಕ್ಕೆ ಬಂದಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಅತಿಥಿಯು ಈ ದೀಪಾವಳಿಗೆ ನೀವು ಅತಿಥಿಯಿಂದ ಫರ್ನಿಚರ್‍ಸ್ ಖರೀದಿಸಿದರೆ ಆಕರ್ಷಕ ಗಿಪ್ಟ್ ಜೊತೆಗೆ ಖರೀದಿ ಮೇಲೆ ಶೇ.10 ರಿಂದ ಶೇ.40 ರ ತನಕ ರಿಯಾಯಿತಿಯನ್ನು ಪಡೆಯುವ ಅವಕಾಶವಿದೆ. ಮನೆಗೆ ಬೇಕಾದ ಎಲ್ಲಾ ರೀತಿಯ ಫರ್ನಿಚರ್‍ಸ್‌ಗಳ ಬೃಹತ್ ಸಂಗ್ರಹವಿದ್ದು ನಿಮಗೆ ಬೇಕಾದ ಫರ್ನಿಚರ್‍ಸ್‌ಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯು ಇಲ್ಲಿದೆ.


ಸೋನಿ ಸೌಂಡ್‌ಬಾರ್ ಕೇವಲ ರೂ.14 ಸಾವಿರಕ್ಕೆ…
ಸೋನಿ ಕಂಪೆನಿಯ ಆಕರ್ಷಕ ಸೌಂಡ್‌ಬಾರ್ ಇದೀಗ ಕೇಲವ 14 ಸಾವಿರಕ್ಕೆ ಖರೀದಿಸುವ ಅವಕಾಶವಿದೆ. ಈ ಸೌಂಡ್‌ಬಾರ್‌ಗೆ 24 ಸಾವಿರ ರೂಪಾಯಿಗಳಿದ್ದು ಇದೀಗ ಬೆಲೆ ಇಳಿಕೆಗೊಂಡಿದ್ದು, 14 ಸಾವಿರಕ್ಕೆ ಖರೀದಿಸಬಹುದಾಗಿದೆ. 5.1 ಇಂಚ್ ಸೌಂಡ್‌ಬಾರ್ ಇದಾಗಿದ್ದು ಡೋಬ್ದಿ ಆಡಿಯೋ ಸಿಸ್ಟಮ್ ಇದರಲ್ಲಿದೆ. ಇದಲ್ಲದೆ ಇತರ ಯಾವುದೇ ಸೌಂಡ್ ಸಿಸ್ಟಮ್‌ಗಳನ್ನು ಅತೀ ಕಡಿಮೆ ಬೆಲೆಯಲ್ಲಿ ನೀವು ಅತಿಥಿಯಿಂದ ಖರೀದಿ ಮಾಡಬಹುದಾಗಿದೆ.


ಅತಿಥಿ ಇದು ನಿಮ್ಮ ಮನೆಯ ಅತಿಥಿ…
ಪ್ರತಿಯೊಬ್ಬರ ಮನೆಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಲಭ್ಯವಿರುವಾಗ ಬೇರೆ ಇತರ ಮಳಿಗೆಗಳನ್ನು ಹುಡುಕುವ ಅಗತ್ಯವೇ ಇಲ್ಲ ಏಕೆಂದರೆ ಅತಿಥಿ ಇದು ಪ್ರತಿಯೊಬ್ಬರ ಮನೆಯ ಅತಿಥಿಯಾಗಿದೆ. ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್‌ಗಳ ಬೃಹತ್ ಸಂಗ್ರಹ ಇಲ್ಲಿದೆ. ದೇಶದ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಐಟಂಗಳು ಒಂದೇ ಕಡೆಯಲ್ಲಿ ಅದರಲ್ಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಕೇವಲ ಸೇಲ್ಸ್ ಮಾತ್ರವಲ್ಲದೆ ಸೇಲ್ಸ್ ಬಳಿಕ ಗ್ರಾಹಕರಿಗೆ ತೃಪ್ತಿದಾಯಕ ಸರ್ವೀಸ್ ಕೂಡ ಅತಿಥಿಯಿಂದ ಸಿಗುತ್ತಿದೆ. ನೀವು ಖರೀದಿಸಿದ ವಸ್ತುಗಳನ್ನು ಸುಭದ್ರವಾಗಿ ಮನೆಗೆ ತಲುಪಿಸುವ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್, ನಗುಮೊಗದ ಸೇವೆ ಎಲ್ಲವೂ ಇಲ್ಲಿದೆ. 13 ವರ್ಷಗಳಿಂದ ಅತಿಥಿ ಎಲ್ಲರ ಮನೆಮನದೊಳಗೆ ಇರುವಾಗ ನೀವ್ಯಾಕೆ ಒಂದ್ಸಲ ಭೇಟಿ ಕೊಡಬಾರದು…

ಹಳೆಯದನ್ನು ಬದಲಾಯಿಸಿ ಹೊಸತರೊಂದಿಗೆ…
ಇನ್ನೂ ಕೂಡ ಅದೇ ಹಳೆಯ ಟಿವಿಯಲ್ಲಿ ಬಿಗ್‌ಬಾಸ್ ನೋಡ್ತಾ ಇದ್ದೀರಾ? ಅದೇ ಹಳೆಯ ವಾರ್ಷಿಂಗ್ ಮೆಷಿನ್‌ನಲ್ಲಿ ಎಷ್ಟಂತ ಬಟ್ಟೆ ಒಗೆಯೋದು? ಇನ್ನು ಆ ಹಳೆಯ ರೆಫ್ರಿಜರೇಟರನ್ನು ಇನ್ನೆಷ್ಟು ದಿನ ಉಪಯೋಗಿಸ್ತೀರಾ? ಬಿಟ್ಟಾಕಿ ಈ ದೀಪಾವಳಿಗೆ ನಿಮ್ಮ ಮನೆಯ ಹಳೆಯ ಟಿವಿ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಗ್ರೈಂಡರ್, ಮಿಕ್ಸಿ, ಗ್ಯಾಸ್ ಸ್ಟವ್ ಎಲ್ಲವನ್ನು ಹೊಸತರೊಂದಿಗೆ ಬದಲಾಯಿಸಿಕೊಳ್ಳಿ..ಅತಿಥಿ ನಿಮಗೆ ಈ ಒಂದು ಅವಕಾಶವನ್ನು ನೀಡಿದ್ದು ಇಂದೇ ಹಳೆಯನ್ನು ಆಕರ್ಷಕ ಬೆಲೆಗೆ ಹೊಸತರೊಂದಿಗೆ ಬದಲಾಯಿಸಿಕೊಂಡು ಈ ದೀಪಾವಳಿಯನ್ನು ಇನ್ನಷ್ಟು ಬೆಳಗಿಸಿ…


ಸ್ಥಳದಲ್ಲೇ ಸಾಲ ಸೌಲಭ್ಯ…
ಸ್ಮಾರ್ಟ್‌ಫೋನ್, ಟಿವಿ ಖರೀದಿಸಬೇಕು ಎಂಬ ಆಸೆ ಇದೆ ಆದ್ರೆ ಹಣ ಇಲ್ಲ ಹಾಗಂತ ಯೋಚಿಸಿಕೊಂಡು ಕೂರ್‍ಬೇಡಿ…ನೇರ ಅತಿಥಿಗೆ ಬನ್ನಿ ನಿಮ್ಮಿಷ್ಠದ ಸ್ಮಾರ್ಟ್‌ಫೋನ್, ಟಿವಿ,ವಾಷಿಂಗ್‌ಮೆಷಿನ್,ರೆಫ್ರಿಜರೇಟರ್ ಯಾವುದು ಅದು ಖರೀದಿಸಿ ಅದೂ ಶೂನ್ಯ ಮುಂಗಡ ಪಾವತಿಯೊಂದಿಗೆ ಆಶ್ಚರ್ಯ ಆಗ್ತಾ ಇದೆಯಾ? ನೀವು ಖರೀದಿಸುವ ಎಲ್ಲಾ ವಸ್ತುಗಳಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಇಲ್ಲಿದೆ. ಕಡಿಮೆ ದಾಖಲೆಗಳು ನಿಮಿಷದಲ್ಲೇ ಸಾಲದ ವ್ಯವಸ್ಥೆ. ಬಜಾಜ್, ಟಿವಿಎಸ್, ಹೆಚ್‌ಡಿಬಿ ಸೇರಿದಂತೆ ಹಲವು ಫೈನಾನ್ಸ್ ಕಂಪೆನಿಗಳಿಂದ ನೀವು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಮೊಬೈಲ್, ಟಿವಿ ಕೆಲವೊಂದು ವಸ್ತುಗಳ ಮೇಲೆ ೧ ಇಎಂಐ ರಿಫಂಡ್ ವ್ಯವಸ್ಥೆಯು ಇದೆ. ಇದಲ್ಲದೆ ೫ ಸಾವಿರದ ತನಕ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here