ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡ ಮಾಡುವ ಬ್ಯಾರಿ ಅಕಾಡೆಮಿ ಚಮ್ಮನ (ಗೌರವ ಪುರಸ್ಕಾರ) ಪ್ರಧಾನ ಮತ್ತು ಬ್ಯಾರಿ ವಿದ್ಯಾರ್ಥಿ ಸಂಗಮ ಕಾರ್ಯಕ್ರಮ ಡಿ 7 ರಂದು ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದ್ದು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಪಿ. ಅಹಮದ್ ಹಾಜಿ ಆಕರ್ಷಣ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಬಳಿಕ ಮಹಿಳೆಯರಿಗೆ ಸಾಂಪ್ರದಾಯಿಕ ಆಹಾರ ಮತ್ತು ಮೆಹೆಂದಿ ವಿನ್ಯಾಸ ಸ್ಪರ್ಧೆ ಹಾಗೂ ಮಕ್ಕಳಿಗೆ ಬ್ಯಾರಿ ಹಾಡು ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ಕ್ವಿಝ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2.00 ಗಂಟೆಯಿಂದ ವಿದ್ಯಾರ್ಥಿ ಸಂಗಮ ಕಾರ್ಯಕ್ರಮ ನಡೆಯಲಿದ್ದು ಈ ಸಂಗಮದಲ್ಲಿ ವಿದ್ಯಾರ್ಥಿ ಯುವಜನರ ಮುಂದಿರುವ ಸವಾಲುಗಳು ಮತ್ತು ಪರಿಹಾರ ಎಂಬ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಲಿದೆ. ನ್ಯಾಯವಾದಿ ಎಂ. ಸಿದ್ದೀಕ್, ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ, ಪುತ್ತೂರು ಕಮ್ಯುನಿಟಿ ಸೆಂಟರ್ ನ ಸ್ಥಾಪಕ ಹನೀಫ್ ಪುತ್ತೂರು ರವರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯಲ್ಲಿ ಕವಿಗಳಾದ ಸಪ್ವಾನ್ ಸವಣೂರು, ಮಹಮ್ಮದ್ ಶರೀಫ್ ನಿರ್ಮುಂಜೆ, ರಹ್ಮತ್ ಪುತ್ತೂರು, ಆಶ್ರಫ್ ಅಪೋಲೊ, ಸಿಂಸಾರುಲ್ ಹಕ್, ಆರ್ಲಪದವು, ಆಯಿಷಾ ಪೆರ್ನೆ, ಸಲೀಂ ಮಾಣಿ, ಯಂಶ ಬೇಂಗಿಲ ಭಾಗವಹಿಸಲಿದ್ದಾರೆ. ಸಂಜೆ 4:00ಗಂಟೆಗೆ ಸಮರೋಪ ಸಮಾರಂಭ ನಡೆಯಲಿದ್ದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ರವರು ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರ ಪ್ರಧಾನ ಮಾಡಲಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರವರು ಬೆರಿಕೆ ಮಿಲ್ಕಿರಿ ಅಕಾಡೆಮಿಯ ಬೆಲ್ಕಿರಿ ದ್ವ್ಯಮಾಸಿಕ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ , ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅಬ್ದುಲ್ಸಮದ್ ಬಾವಾ ಹಾಜಿಸಾಹಿತ್ಯ ಅನ್ಸಾರ್ ಇನ್ನೋಳಿ ಭಾಷೆ ರಶೀದ್ ನಂದಾವರ ಕಲೆ ಸಂಸ್ಕೃತಿ ನಜ್ಮತ್ತುನ್ನೀಸಾ,ಲೈಝ್ ಸಾಹಿತ್ಯ ಮುಹಮ್ಮದ್ ಅಲಿ ಬಡ್ಡೂರು ಸಂಸ್ಕೃತಿ ಕಲೆ ಟಿ.ಎಂ. ಶಹೀದ್ ಭಾಷೆ ಸಂಘಟನೆ ಯಂ.ಪಿ. ಬಶೀರ್ ಅಹ್ಮದ್ ಸಾಹಿತ್ಯ ಯಾಸೀರ್ ಕಲ್ಲಡ್ಕ ಸಂಸ್ಕೃತಿ ಮಲ್ಲಿಕಾ ಶೆಟ್ಟಿ ಕಲೆ ಸಂಸ್ಕೃತಿ ಸೈಫ್ ಕುತ್ತಾರ್ ಭಾಷೆ ಇವರು 2022 ಮತ್ತು 2023ನೇ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರ ಸ್ವೀಕರಿಸಲಿದ್ದಾರೆ. ಮಂಜೇಶ್ವರದ ಶಾಸಕ ಎ.ಕೆ. ಎಂ. ಅಶ್ರಫ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತ್ ಅಧ್ಯಕ್ಷ ಕೆ.ಪಿ.ಮುಹಮ್ಮದ್ ಹಾಜಿ, ಪುತ್ತೂರು ತಾಲೂಕು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ದಫ್ಪ್ ಹಾಡು, ಮತ್ತು ಬ್ಯಾರಿ ಹಾಡುಗಳ ಸಂಭ್ರಮ ನಡೆಯಲಿದೆ ಎಂದು ಉಮರ್ ಯು.ಹೆಚ್. ರವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಡಾ ಅಬೂಬಕ್ಕರ್ ಅರ್ಲಪದವು, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ ಉಪಾಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ಕಾರ್ಯದರ್ಶಿ ವಿ.ಕೆ. ಶರೀಫ್ ಬಪ್ಪಳಿಗೆ ಹಾಗೂ ಸಂಘಟನಾ ಕಾರ್ಯದರ್ಶಿ ನ್ಯಾಯವಾದಿ ಕೆ.ಎಂ. ಸಿದ್ದಿಕ್, ಹಾಜಿ ರವರು ಉಪಸ್ಥಿತರಿದ್ದರು.
