ಕಾಣಿಯೂರು: ಬರೆಪ್ಪಾಡಿ ಅಂಗನವಾಡಿ ಕೇಂದ್ರದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಯೋಗೀಶ ಬರೆಪ್ಪಾಡಿ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಕಾರ್ಲಾಡಿ ಅವರು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ರಂಜಿತ್ ಮುದ್ಯ ಬರೆಪ್ಪಾಡಿ, ಉಮೇಶ್ ಕಾರ್ಲಾಡಿ, ಷಣ್ಮುಖ ಬರೆಪ್ಪಾಡಿ, ಅಕ್ಷಯ್ ಬರೆಪ್ಪಾಡಿ, ಗಣೇಶ ಕಾಪೆಜಾಲು, ಶಿವಪ್ರಸಾದ್ ಹೊಸಹೂಕ್ಲು, ನಿತಿನ್ ಬರೆಪ್ಪಾಡಿ, ಸಂಧ್ಯಾ ಬರೆಪ್ಪಾಡಿ, ಮೀನಾಕ್ಷಿ ಕುವೇತೋಡಿ, ತೃಪ್ತಿ, ಪ್ರತೀಕ್ಷಾ ಬರೆಪ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಅವರು ಪ್ರಾಸ್ತವಿಕದೊಂದಿಗೆ ಸ್ವಾಗತಿಸಿದರು.
ಅಂಗನವಾಡಿ ಸಹಾಯಕಿ ಸೌಮ್ಯ ಪಟ್ಟೆ ಸಹಕರಿಸಿದರು.
