ದರ್ಬೆ: ಹನುಮಾನ್ ವಾಡಿ ನಿವಾಸಿ ಪುಷ್ಪಾಂಜಲಿ ಕಲಾ ಮಂದಿರದ ಮಾಲೀಕ, ದಿ. ಹನುಮಂತ ಭಟ್ ಅವರ ಹಿರಿಯ ಪುತ್ರ ಬಿ.ವೆಂಕಟೇಶ್ ಭಟ್ (ಶ್ರೀರಾಮ್ ಭಟ್) (78ವ) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಉಷಾ ಭಟ್, ಪುತ್ರ ಕಾಮಾಕ್ಷಿ ಎಂಟರ್ ಪ್ರೈಸಸ್ ಮಾಲಕ ಆನಂದ್ ಭಟ್, ಸೊಸೆ ಕಾಮಾಕ್ಷಿ ಸ್ಟೀಲ್ಸ್ ಮಾಲಕಿ ಸೌಮ್ಯ ಭಟ್, ಅಮೇರಿಕಾದಲ್ಲಿರುವ ಪುತ್ರಿ ಅಮಿತಾ ಪೈ, ಅಳಿಯ ಅಮರ್ ಪೈ, ಮೊಮ್ಮಕ್ಕಳಾದ ರಿಷಬ್ ಪೈ, ರಿತಿಕ್ ಪೈ, ಅನ್ಮಯಿ ಭಟ್, ಅಮೈ ಭಟ್ ಸಹೋದರ ನರಸಿಂಹ ಭಟ್, ಸಹೋದರಿಯಾರಾದ ಲತಾ ಬಾಳಿಗ, ಉಷಾ ಶೆಣೈ, ಶೋಭಾ ಭಂಡಾರ್ಕರ್, ಪ್ರಭಾ ನಾಯಕ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
