ಪುತ್ತೂರು: ಮಂಗಳೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 19ರಂದು ನಡೆದ 22ನೇ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪುತ್ತೂರು ನಿವಾಸಿ ಶ್ರೀಕಾಂತ್ ಪ್ರಭು 30ರ ವಯೋಮಾನದ 800 ಮೀ ಓಟ ಮತ್ತು 400ಮೀ ಓಟದಲ್ಲಿ ಚಿನ್ನದ ಪದಕ ಹಾಗೂ 200 ಮೀ ಓಟದಲ್ಲಿ ಬೆಳ್ಳಿಯ ಪದಕ ಗಳಿಸಿ ಡಿಸೆಂಬರ್ ನಲ್ಲಿ ಕೋಲಾರದಲ್ಲಿ ನಡೆಯುವ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇಜರ್ ವೆಂಕಟ್ ರಾಮಯ್ಯ, ಅಥ್ಲೆಟಿಕ್ ಕ್ಲಬ್ ಕೊಂಬೆಟ್ಟು ಹಾಗೂ ಶ್ರೀ ನಿಧಿ ಆರ್ಯಾಪು ಇವರಿಗೆ ತರಬೇತಿ ನೀಡಿರುತ್ತಾರೆ .