ರೋಟರಿ ಪುತ್ತೂರುಗೆ ಸಮಗ್ರ ಪ್ರಶಸ್ತಿ, ರೋಟರಿ ಎಲೈಟ್ ರನ್ನರ್ಸ್
ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ “ತಕಧಿಮಿತ” ಕಾರ್ಯಕ್ರಮವು ಅ.19ರಂದು ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಜರಗಿದ್ದು ಯಶಸ್ವಿಯಾಗಿ ಸಮಾಪನಗೊಂಡಿದೆ.

ಜಿಲ್ಲೆಯ ಹಿರಿಯ ಕ್ಲಬ್ ಎನಿಸಿರುವ ರೋಟರಿ ಕ್ಲಬ್ ಪುತ್ತೂರು ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ರೋಟರಿ ಕ್ಲಬ್ ಪುತ್ತೂರು ಎಲೈಟ್ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಸಮಗ್ರ ಪ್ರಶಸ್ತಿ ವಿಜೇತರಾದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ರನ್ನರ್ಸ್ ಪ್ರಶಸ್ತಿ ವಿಜೇತರಾದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜರವರಿಗೆ ಅತಿಥಿ ಗಣ್ಯರು ಪ್ರಶಸ್ತಿಯನ್ನು ವಿತರಿಸಿದರು.
ರೋಟರಿ ಜಿಲ್ಲೆ 3181, ವಲಯ ಐದರ ವ್ಯಾಪ್ತಿಗೊಳಪಟ್ಡ ರೋಟರಿ ಕ್ಲಬ್ ಗಳಾದ ಪುತ್ತೂರು ಯುವ, ರೋಟರಿ ಪುತ್ತೂರು, ರೋಟರಿ ಸೆಂಟ್ರಲ್, ಪುತ್ತೂರು ಎಲೈಟ್, ಪುತ್ತೂರು ಸ್ವರ್ಣ, ರೋಟರಿ ಬೆಳ್ಳಾರೆ, ರೋಟರಿ ಕಡಬ, ರೋಟರಿ ವಿಟ್ಲ ಸೇರಿದಂತೆ ಹನ್ನೊಂದು ಕ್ಲಬ್ ಗಳು ಭಾಗವಹಿಸಿತ್ತು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಿರು ನಾಟಕ(ಸ್ಕಿಟ್), ಸಮೂಹ ಗಾನ, ಸಮೂಹ ನೃತ್ಯ, ಸೋಲೋ ಹಾಡು(ವಯೋಮಿತಿ 14ರ ಒಳಗಿನ), ಡ್ಯುಯೆಟ್ ಹಾಡು, ಡ್ಯುಯೆಟ್ ನೃತ್ಯ, ಸೋಲೋ ನೃತ್ಯ(18ರ ಒಳಗಿನ ಸ್ಪರ್ಧೆ), ಸೋಲೋ ನೃತ್ಯ(14ರ ಒಳಗಿನ ಸ್ಪರ್ಧೆ) ಒಳಗೊಂಡಿತ್ತು.
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ವಹಿಸಿದ್ದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು, ರೋಟರಿ ವಲಯ ಸೇನಾನಿ ಪ್ರಮೀಳಾ ರಾವ್, ರೋಟರಿ ವಲಯ ಸಾಂಸ್ಕೃತಿಕ ಸಂಯೋಜಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ, ರೋಟರಿ ಪುತ್ತೂರು ಈಸ್ಟ್ ಕಾರ್ಯದರ್ಶಿ ನವೀನ್ ರೈ ಪಂಜಳ, ಕೋಶಾಧಿಕಾರಿ ಜಯಂತ್ ಬಾಯಾರು, ಕ್ಲಬ್ ಸಾಂಸ್ಕೃತಿಕ ಚೇರ್ಮನ್ ನವೀನ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.
ಶಶಿಧರ್ ಕಿನ್ನಿಮಜಲುರವರ ಅಧ್ಯಕ್ಷತೆಯಲ್ಲಿ ಯಶಸ್ವಿ ಕಾರ್ಯಕ್ರಮ..
ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರ ನೇತೃತ್ವದಲ್ಲಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರಲ್ಲೂ ರೋಟರಿ ವಲಯ ಐದರ ವ್ಯಾಪ್ತಿಗೊಳಪಟ್ಟ ರೋಟರಿ ಕ್ಲಬ್ ಗಳನ್ನು ಒಂದೆಡೆ ಸೇರಿಸಿ ಆ ಕ್ಲಬ್ ಸದಸ್ಯರ, ಕುಟುಂಬಿಕರ ಪ್ರತಿಭೆಯನ್ನು ಓರೆಗೆ ಹಚ್ಚಲು “ತಕಧಿಮಿತ” ಹೆಸರಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿ ಹೃದಯ ಹಾಗೂ ಮನಸ್ಸಿಗೆ ಮುದ ನೀಡುವಲ್ಲಿ ಯಶಸ್ವಿ ಕಂಡಿರುವುದು ಶ್ಲಾಘನೀಯ. ಈ ಸ್ಪರ್ಧೆಯಲ್ಲಿ ಮನುಷ್ಯನ ಯಶಸ್ವಿ ಬದುಕಿಗೆ ಬೇಕಾದ ಸಂದೇಶಗಳನ್ನು ತೋರ್ಪಡಿಸಿರುವುದು ಮಾತ್ರವಲ್ಲ ಈ ಸ್ಪರ್ಧೆಗೆ ರೋಟರಿ ಈಸ್ಟ್ ಪೂರ್ವಾಧ್ಯಕ್ಷರಾದ ಜಯಂತ್ ನಡುಬೈಲುರವರ ಅಕ್ಷಯ ಕಾಲೇಜು ಕೂಡ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಶಶಿಧರ್ ಕಿನ್ನಿಮಜಲುರವರ ನೇತೃತ್ವದಲ್ಲಿ ಇನ್ನೂ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಿ.
-ಡಾ.ರಾಜಾರಾಮ್ ಕೆ.ಬಿ,
ಅಸಿಸ್ಟೆಂಟ್ ಗವರ್ನರ್, ರೋಟರಿ ವಲಯ ನಾಲ್ಕು