ನಾಳೆ(ಅ.22)ಕುಂಬ್ರ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ ಶ್ರೀ ಲಕ್ಷ್ಮೀಪೂಜೆ

0

ಪುತ್ತೂರು: ಚಿನ್ನ ಬೆಳ್ಳಿ ಆಭರಣಗಳ ವರ್ಕ್ಸ್ ಶಾಫ್ ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ 24 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ನಿಟ್ಟಿನಲ್ಲಿ ವರ್ಕ್ಸ್ ಶಾಫ್‌ನಲ್ಲಿ ಅ.22 ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ ಮತ್ತು ಶ್ರೀ ಲಕ್ಷ್ಮೀ ಪೂಜೆ ನಡೆಯಲಿದೆ.

ದೈವ ದೇವರುಗಳ ಆಭರಣಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡುವ ವ್ಯವಸ್ಥೆ ಸೇರಿದಂತೆ ಗ್ರಾಹಕರಿಗೆ ಬೇಕಾದ ಚಿನ್ನ, ಬೆಳ್ಳಿಯ ಎಲ್ಲಾ ರೀತಿಯ ಆಭರಣಗಳನ್ನು ಅವರ ಮನದಿಚ್ಚೆಯಂತೆ ಮಾಡಿಕೊಡುವ ವ್ಯವಸ್ಥೆಯೂ ಇಲ್ಲಿದೆ. ಇದಲ್ಲದೆ ಬೆಳ್ಳಿಯ ಆಭರಣಗಳಿಗೆ ಚಿನ್ನದ ಒಪ್ಪ ಹಾಕಿ ಕೊಡುವ ಸೇವೆ ಲಭ್ಯವಿದೆ. ಪಾದಾರ್ಪಣೆಯ ಸಂದರ್ಭದಲ್ಲಿ ಸಹಕರಿಸಿದ ಸಮಸ್ತ ಗ್ರಾಹಕರಿಗೆ ಕೃತಜ್ಞತೆಗಳೊಂದಿಗೆ ಶ್ರೀ ಲಕ್ಷ್ಮೀಪೂಜೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಹಕಾರ, ಪ್ರೋತ್ಸಾಹ ನೀಡುವಂತೆ ಜ್ಯುವೆಲ್ಲರಿ ವರ್ಕ್ಸ್ ಶಾಫ್ ಮಾಲಕ ಉದಯ ಆಚಾರ್ಯ ಕೃಷ್ಣನಗರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here