ಪುತ್ತೂರು: ಜೆಸಿಐ ಭಾರತ ವಲಯ 15 ರ ವಲಯ ಸಮ್ಮೇಳನ ‘ಕಹಳೆ 2025’ ಅಕ್ಟೋಬರ್ 18 ಹಾಗೂ 19 ರಂದು ಮಂಗಳೂರು ಸುಲ್ತಾನ್ ಬತ್ತೆರಿಯ ಸ್ವಸ್ತಿಕ್ ವಾಟರ್ ಫ್ರಂಟ್ ನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಜೆಸಿಐ ನೆಲ್ಯಾಡಿಗೆ ಹಲವಾರು ಪ್ರಶಸ್ತಿ ಹಾಗೂ ಮನ್ನಣೆ ಗಳು ದೊರಕಿದೆ.ಸುಮಾರು 42 ವರ್ಷಗಳ ಇತಿಹಾಸವಿರುವ ಜೆಸಿಐ ನೆಲ್ಯಾಡಿಗೆ ಈ ಸಂದರ್ಭದಲ್ಲಿ ಈ ವರ್ಷ ಮಾಡಿದ ತರಬೇತಿ ಕಾರ್ಯಕ್ರಮ,ಬೇಸಿಗೆ ಶಿಬಿರ,ಪುಸ್ತಕ ವಿತರಣೆ , ಜೆಸಿ ಸಪ್ತಾಹ, ಸಾರ್ವಜನಿಕ ಕ್ರೀಡಾಕೂಟ, ನೇತ್ರ ತಪಾಸಣಾ ಶಿಬಿರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಮಾಡಿದ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ಸೇರಿದಂತೆ ಮಾಡಿದ ಹಲವಾರು ಕಾರ್ಯಕ್ರಮಗಳಿಗೆ 20 ಕ್ಕೂ ಅಧಿಕ ಪ್ರಶಸ್ತಿ ಮನ್ನಣೆ ಗಳು ದೊರಕಿದೆ.
ಇತ್ತೀಚೆಗಷ್ಟೇ ನೆಲ್ಯಾಡಿಯ ಗಾಂಧಿ ಮೈದಾನಕ್ಕೆ ಅಳವಡಿಸಿದ ಸಿಮೆಂಟ್ ಬೆಂಚು ಶಾಶ್ವತ ಯೋಜನಗೆ ಜೆಸಿಐ ಭಾರತದ Outstanding national sustainable solutions project ರನ್ನರ್ ಪುರಸ್ಕಾರ ಲಭಿಸಿದೆ. ಜೆಸಿಐ ನೆಲ್ಯಾಡಿ ಅಧ್ಯಕ್ಷರಾದ ಜೆಸಿ ಡಾ. ಸುಧಾಕರ್ ಶೆಟ್ಟಿ ಯವರು Outstanding JCI India foundation member ರನ್ನರ್ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜೆಸಿಐ ನೆಲ್ಯಾಡಿಯ ಈ ವರ್ಷದ ನೂತನ ಸದಸ್ಯೆ ಜೆಸಿ ಪ್ರವೀಣಿ ಶೆಟ್ಟಿಯವರು ವಲಯ ಮಟ್ಟದ ಔಟ್ ಸ್ಟ್ಯಾಂಡಿಂಗ್ ನ್ಯೂ ಲೇಡಿ ಜೆಸಿ ಮೆಂಬರ್ ವಿನ್ನರ್ ಪ್ರಶಸ್ತಿ ಪಡೆದು ಕೊಂಡರು.
ವಲಯ ಸಮ್ಮೇಳನದಲ್ಲಿ ಜೆಸಿಐ ನೆಲ್ಯಾಡಿ ಅಧ್ಯಕ್ಷರಾದ ಜೆಸಿ ಡಾ. ಸುಧಾಕರ್ ಶೆಟ್ಟಿ, ಜೆಸಿ ಅಬ್ರಹಾಂ ವರ್ಗಿಸ್, ಜೆಸಿ ಸುಚಿತ್ರ ಬಂಟ್ರಿಯಲ್ ಜೆಸಿ ಪ್ರವೀಣಿ ಶೆಟ್ಟಿ ಜೆಸಿ ಪುರಂದರ ಗೌಡ ಜೆಸಿ ಜಾಹ್ನವಿ ಜೆಸಿ ಲೀಲಾ ಮೋಹನ್ ಜೆಸಿ ಜಾನ್ ಪಿ ಎಸ್, ಜೆಸಿ ಸುಪ್ರೀತ ರವಿಚಂದ್ರ, ಜೆಸಿ ದಯಾಕರ್ ರೈ, ಜೆಸಿ ಶಿವಪ್ರಕಾಶ್, ಜೆಸಿ ಲಕ್ಷ್ಮಣ ಟೈಲರ್, ಜೆಸಿ ಅಶೋಕ್ ರೈ ಹಾಗೂ ಮತ್ತಿತರರು ಭಾಗವಹಿಸಿದ್ದರು.