- ಇತಿಹಾಸದಲ್ಲೇ ಮೊದಲು
- ಮಂಗಳೂರು ಮೂಲದ ಆನ್ ಲೈನ್ ಪೆಟ್ ಸ್ಟೋರ್
- www.puphip.com ಗೆ ಭೇಟಿ ನೀಡಿ ಆರ್ಡರ್ ಮಾಡಿ
ಪುತ್ತೂರು: ಇಂದಿನ ಒಂದಷ್ಟು ಯುವ ಜನಾಂಗವು ತಮ್ಮ ಮನೆಯೊಳಗೆ ಮುದ್ದಿನ ಸಾಕು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅದರಲ್ಲೂ ಹೈಬ್ರೀಡ್ ಶ್ವಾನ, ಬೆಕ್ಕುಗಳನ್ನು ಸಾಕುವುದು ಸುಲಭದ ಕೆಲಸವಲ್ಲ. ಅದರದ್ದೇ ಆಹಾರ ನೀಡುವುದರ ಜೊತೆಗೆ, ಸಮಯಕ್ಕೆ ಸರಿಯಾಗಿ ಔಷಧಗಳನ್ನು ನೀಡಲೇಬೇಕು. ಇವುಗಳು ಪೆಟ್ ಶಾಪ್ ಗಳಲ್ಲಿ ಲಭ್ಯವಿರುತ್ತದೆ.
ನಿಮ್ಮ ಮನೆಯಲ್ಲಿ ಇಂತಹ ಪ್ರಾಣಿಗಳಿದ್ದು, ಅದಕ್ಕೆ ಬೇಕಾದ ಆಹಾರ, ಔಷಧ ಇನ್ನಿತರ ಪರಿಕರಗಳನ್ನು ತರಲು ನೀವು ಶಾಪ್ ಗಳಿಗೆ ಹೋಗುತ್ತಿದ್ದರೆ ಚಿಂತಿಸಬೇಡಿ. ಏಕೆಂದರೆ, ಇನ್ನು ಮುಂದೆ ಆನ್ ಲೈನ್ ಮೂಲಕ ತರಿಸಿಕೊಳ್ಳಬಹುದು.

ಹೌದು, ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೆಟ್ ಪ್ಲಾನೆಟ್ ಸಂಸ್ಥೆಯು ಇದೀಗ ತನ್ನ ಮಾರುಕಟ್ಟೆಯನ್ನು ಆನ್ ಲೈನ್ ಗೆ ವಿಸ್ತರಿಸಿದೆ.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು www.puphip.com ಎಂಬ ಆನ್ ಲೈನ್ ಜಾಲವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಣಿ ಪಕ್ಷಿಗಳ ಆಹಾರಗಳ ಆನ್ ಲೈನ್ ಮಾರ್ಕೆಟಿಂಗ್ ಮಹಾಲಿಂಗೇಶ್ವರ ದೇವಾಲಯದಲ್ಲಿ ಉದ್ಘಾಟನೆಗೊಂಡಿದೆ. ಇನ್ನು ಮುಂದೆ ಆನ್ ಲೈನ್ ಮೂಲಕ ಸಾಕು ಪ್ರಾಣಿಗಳ ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳು ಲಭ್ಯವಾಗಲಿದೆ. ಪೆಟ್ ಪ್ಲಾನೆಟ್ ನವರ ಈ ವ್ಯವಹಾರವೂ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭಹಾರೈಸಿದರು. ಅಲ್ಲದೆ, ಮೊದಲ ಆನ್ ಲೈನ್ ಆರ್ಡರ್ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನಲ್ಲಿ ಹೊಸ ಆನ್ ಲೈನ್ ಸ್ಟೋರ್ ಪ್ರಾರಂಭವಾಗಿದೆ. ಸಾಕು ಪ್ರಾಣಿಗಳಿಗೆ ಬೇಕಾದ ಆಹಾರ ಔಷಧಿಗಳನ್ನು ತರಲು ಶಾಪ್ ಗಳಿಗೆ ಹೋಗಬೇಕಿಲ್ಲ. ಪೆಟ್ ಪ್ಲಾನೆಟ್ ಅವರ ಆನ್ ಲೈನ್ ಸ್ಟೋರ್ ಮೂಲಕ ಆರ್ಡರ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಉತ್ತಮ ಉದ್ಯಮಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಇ ಕಾಮರ್ಸ್ ಸಂಸ್ಥೆಗಳು ಇನ್ನಷ್ಟು ಬೆಳೆಯಬೇಕು. ಇಂತಹ ಉದ್ಯಮಗಳು ಇನ್ನಷ್ಟು ಪ್ರಾರಂಭವಾಗಬೇಕು ಎಂದು ಹೇಳಿ ಆನ್ ಲೈನ್ ಉದ್ಯಮಕ್ಕೆ ಶುಭಹಾರೈಸಿದರು.
ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ಮಾಲಕ ಪ್ರವೀಣ್ ಅವರು ಇದೀಗ ಆನ್ ಲೈನ್ ಮಾರ್ಕೆಟಿಂಗ್ ಪ್ರಾರಂಭಿಸಿದ್ದಾರೆ. ಈ ಪೆಟ್ ಪ್ಲಾನೆಟ್ ನಲ್ಲಿ ಸಿಗುವಂತಹ ಆಹಾರವನ್ನು ನಿಮ್ಮ ಮನೆಯ ಸಾಕು ಪ್ರಾಣಿಗಳಿಗಾಗಿ ಖರೀದಿಸುವಂತೆ ಮನವಿ ಮಾಡಿದರು. ಪ್ರವೀಣ್ ಅವರು ಇಂತಹ ಹೊಸ ಪ್ರಯೋಗ, ಸಾಹಕ್ಕೆ ಕೈಹಾಕಿದ್ದಾರೆ. ಇವರ ಈ ಉದ್ಯಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಪಶುವೈದ್ಯ ಪ್ರಸನ್ನ ಹೆಬ್ಬಾರ್ ಮಾತನಾಡಿ, ಪೆಟ್ ಶಾಪ್ ನಂತರ ಇದೀಗ ಪ್ರಾಣಿಗಳಿಗೆ ಬೇಕಾದ ಔಷಧಿ ಶಾಪನ್ನೂ ಪ್ರಾರಂಭಿಸಿದ್ದಾರೆ. ಇದೀಗ ಆನ್ ಲೈನ್ ಗೂ ಪ್ರವೇಶಿಸಿದ್ದಾರೆ. ಆನ್ ಲೈನ್ ನಲ್ಲಿ ನಿಮಗೆ ಬೇಕಾದ ಆಹಾರ, ಔಷಧಗಳನ್ನು ಆಯ್ಕೆ ಮಾಡಿ ಖರೀದಿಸಲು ಸಹಕಾರಿಯಾಗಲಿದೆ ಎಂದರು.
ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿನಯ್ ಸುವರ್ಣ, ದಿನೇಶ್ ಪಿವಿ, ಮಹಾಬಲ ರೈ ವಳತ್ತಡ್ಕ, ನಳಿನಿ ಪಿ ಶೆಟ್ಟಿ, Zyple ಸಾಫ್ಟ್‌ವೇರ್ ಸೆಲ್ಯೂಷನ್ಸ್ ಪ್ರೈ. ಲಿ. ಸಿಇಒ ಷಣ್ಮಗಂ ವಿ, ಸಿಟಿಒ ಮರುಥ ನಾಯಗಂ ಕೆ, ಸಿಎಕ್ಸ್ಒ ಮಧುಬಾಲನ್ ಆರ್. ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮ ನಿರೂಪಿಸಿದ ಪತ್ರಕರ್ತೆ ಪ್ರಜ್ಞ ಸ್ವಾಗತಿಸಿ, ಪೆಟ್ ಶಾಪ್ ಮಾಲಕ ಪ್ರವೀಣ್ ರಾಜ್ ವಂದಿಸಿದರು. ಪ್ರವೀಣ್ ಅವರ ಪತ್ನಿ ರಶ್ಮೀಲ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಪುತ್ರಿಯರಾದ ಪ್ರೌಲ್ಮೀ, ಪ್ರಾಕ್ಷ್ಣ ಉಪಸ್ಥಿತರಿದ್ದರು.
ಇವೆಲ್ಲ ಲಭ್ಯ
Dog food, cat food, treats, toys, clothing, grooming range, accessories, beds and mats, Bowls and feeders, cage and crates, medicine, catlitter, hamster and guinea pings, supplements, coller leashes and harnesses, vitamins, growth promoters, liver tonics