ಪುತ್ತೂರು: ಮಂಗಳೂರು ವಿಭಾಗದ ಗುತ್ತಿಗೆ ಸಹಾಯಕ ಸರಕಾರಿ ಅಭಿಯೋಜಕರಿಗೆ ಇನ್ನೂ ಕೂಡ ತಿಂಗಳ ಸಂಬಳ ಪಾವತಿಯಾಗದೆ ಇರುವುದರಿಂದ ಸರಕಾರಿ ಅಭಿಯೋಜಕರು ತೊಂದರೆಯಲ್ಲಿದ್ದಾರೆ. ಸರಕಾರದಿಂದ ಅನುದಾನ ಬಂದಿದ್ದರೂ ಸಹ ತಿಂಗಳ ಸಂಚಿತ ವೇತನ ಪಾವತಿ ಮಾಡಲು ಮೇಲಾಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ ಸರಕಾರದ ವತಿಯಿಂದ ಅಭಿಯೋಜನ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಹಾಯಕ ಸರಕಾರಿ ಅಭಿಯೋಜಕರುಗಳು ಅದರಲ್ಲೂ ಮಂಗಳೂರು ವಿಭಾಗದ ಸರಕಾರಿ ಸಹಾಯಕ ಅಭಿಯೋಜಕರುಗಳು ಪ್ರತಿ ತಿಂಗಳ ಸಂಚಿತ ವೇತನಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಸರಕಾರದ ಅನುದಾನ ಇದ್ದರೂ ಸಹ ಮಂಗಳೂರು ವಲಯದ ಕಾನೂನು ಅಧಿಕಾರಿ ಹಿರಿಯರವರು ಸರಿಯಾದ ಸಮಯಕ್ಕೆ ಸಂಚಿತ ವೇತನದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಗುತ್ತಿಗೆ ಆದರದ ಸಹಾಯಕ ಸರಕಾರಿ ಅಭಿಯೋಜಕರುಗಳು ತಮ್ನ ಸಂಕಷ್ಟ ತೋಡಿಕೊಂಡಿದ್ದಾರೆ. ಪ್ರತಿ ತಿಂಗಳಿನ ವೇತನವನ್ನು 20ರಿಂದ 25ನೇ ತಾರೀಕಿನವರೆಗೆ ತಡವಾಗಿ ಪಾವತಿ ಮಾಡುತ್ತಿರುವುದರಿಂದ ನಮಗೆ ಬಹಳ ಕಷ್ಟಕರವಾಗುತ್ತಿದೆ ನಮಗೂ ಕುಟುಂಬ ನಿರ್ವಹಣೆಗೆ ವೇತನವೇ ಆಧಾರವಾಗಿದೆ. ಸರಕಾರದಿಂದ ಅನುದಾನ ಇದ್ದರೂ ಸಹ ಅದನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದೇ ನಮಗೆ ತೊಂದರೆ ನೀಡುತ್ತಿರುವುದಾಗಿ ತಮ್ಮ ಆಳಳನ್ನು ಗುತ್ತಿಗೆ ಸರಕಾರಿ ಸಹಾಯಕ ಅಭಿಯೋಜಕರುಗಳು ತೋಡಿಕೊಂಡಿದ್ದಾರೆ. ಈಗಾಗಲೇ ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರೂ ವೇತನ ಸರಿಯಾಗಿ ಪಾವತಿ ಮಾಡದೇ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮ ಪಂಚಾಯತ್ ನೌಕರರರಿಗೆ ರಾಜ್ಯ ಸರಕಾರ 5ನೇ ತಾರೀಕಿನ ಒಳಗಡೆ ವೇತನ ಪಾವತಿ ಮಾಡಲು ಆದೇಶಿಸಿದೆ ಹಾಗೆಯೇ ನಮಗೂ ಸಹ ನಮ್ಮ ಇಲಾಖೆ ಆದೇಶಿಸಿದರೆ ಉತ್ತಮ ಎಂದು ಸರಕಾರಿ ಸಹಾಯಕ ಅಭಿಯೋಜಕರುಗಳು ವಿನಂತಿಸಿಕೊಂಡಿದ್ದಾರೆ.