ಪುತ್ತೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾದ ಘಟನೆ ಬಪ್ಪಳಿಗೆಯಲ್ಲಿ ನಡೆದಿದೆ.
ಬಪ್ಪಳಿಗೆ ನಿವಾಸಿ ನೆಬಿಸಾ ಎಂಬವರು ತನ್ನ ಮನೆ ಸಮೀಪದ ಕೊಟ್ಟಿಗೆಯಲ್ಲಿ ದನವನ್ನು ಕಟ್ಟಿ ಹಾಕಿ ಬೆಳಿಗ್ಗೆ ಪುತ್ತೂರಿಗೆ ಬಂದಿದ್ದರು. ಸಂಜೆ ಮನೆಗೆ ಹೋಗಿ ನೋಡುವಾಗ ದನ ಅಲ್ಲಿರಲಿಲ್ಲ. ಎರಡು ದಿನ ಹುಡುಕಾಡಿದರೂ ದನ ಪತ್ತೆಯಾಗಿಲ್ಲ. ಈ ಬಗ್ಗೆ ನೆಬಿಸಾರವರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.