ಪುತ್ತೂರು: ಇತ್ತೀಚೆಗೆ ನಿಧನರಾದ ಸಾಮಾಜಿಕ ಧಾರ್ಮಿಕ ಮುಂದಾಳು, ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಕೆಯ್ಯೂರಿನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆದಂಬಾಡಿ ಕೆಯ್ಯೂರು ಇದರ ಅಧ್ಯಕ್ಷ, ಊರಿನ ಹಲವು ಸಂಘ ಸಂಸ್ಥೆಗಳ ಗೌರವಾಧ್ಯಕ್ಷರಾಗಿದ್ದ ದಿ.ಶಶಿಧರ ರಾವ್ ಬೊಳಿಕ್ಕಳ ಇವರಿಗೆ ಬಿಜೆಪಿ ಶಕ್ತಿ ಕೇಂದ್ರ ಕೆಯ್ಯೂರು ಮತ್ತು ವಾರ್ಡ್ ಸಮಿತಿಯ ವತಿಯಿಂದ ಕೆಯ್ಯೂರು ಜಯಕರ್ನಾಟಕ ಸಭಾ ಭವನದಲ್ಲಿ ಶ್ರದ್ಧಾಂಜಲಿ ಸೂಚಕ ಸಭೆ ನಡೆಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಮಾತನಾಡಿ, ಶಶಿಧರ ರಾವ್ ಬೊಳಿಕ್ಕಳ ಅವರು ಹಿರಿಯರೊಂದಿಗೆ ಹಿರಿಯರಾಗಿ ಕಿರಿಯರೊಂದಿಗೆ ಬೆರೆಯುತ್ತಿದ್ದಂತಹ ಅದ್ಭುತ ವ್ಯಕ್ತಿತ್ವದ ಮತ್ತು ಸಮಾಜದ ಪ್ರತಿಯೊಬ್ಬರಿಗೂ ತನ್ನ ಸಹಾಯ ಹಸ್ತ ಚಾಚುತ್ತಿದ್ದ ಅದಮ್ಯ ಚೇತನ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಶಶಿಧರ್ ರಾವ್ ಭೂಮಿಯಂತೆ ಬದುಕಿದವರು. ಭೂಮಿ ತಾಯಿ ತನ್ನೊಡಲಲ್ಲಿ ಇರುವ ಎಲ್ಲವನ್ನು ಹಂಚಿ ನಿಶ್ಚಿಂತೆಯಂತೆ ಇರುವಂತೆ ಶಶಿಯಣ್ಣ ಸಹ ಬೇಡಿ ಬಂದವರಿಗೆ ಇಲ್ಲ ಎಂದವರಲ್ಲ, ಅದೆಷ್ಟೋ ಜನರಿಗೆ ಇರಲು ನೆಲೆ ನೀಡಿದ ಮಹಾತ್ಮರು ಎಂದರು.
ದಂಬೆಕಾನ ಸದಾಶಿವ ರೈ ಅವರು ಮಾತನಾಡಿ, ಶಶಿಧರ ರಾವ್ ಅವರ ಜತೆಗಿನ ನೆನಪುಗಳನ್ನು ಹಂಚಿಕೊಂಡು ಅವರ ಅತ್ಮಕ್ಕೆ ಸ್ವರ್ಗ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿದರು.
ಕೆಯ್ಯೂರು ಯುವಕ ಮಂಡಲ ಸ್ಥಾಪಕಧ್ಯಕ್ಷ ಚಂದ್ರಹಾಸ ರೈ ಅವರು ಮಾತನಾಡಿ, ದಶಕಗಳ ಹಿಂದೆ ದೇವಸ್ಥಾನ ಕೆಲಸಗಳಿಗೆ ಶ್ರೀ ದುರ್ಗಾ ಯುವಕ ಮಂಡಲದ ಕೊಡುಗೆ ಅಪಾರ ಇದರ ಸ್ಥಾಪನೆಗೆ ಮೂಲ ಕಾರಣಕರ್ತರು ಶಶಿಧರ ರಾವ್ ಅವರು. ಅವರ ಆತ್ಮೀಯ ಒಡನಾಟ ನೆನಪಿಸಿಕೊಂಡು ಅವರು ಅತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಸಂಘದ ಹಿರಿಯ ಕಾರ್ಯಕರ್ತರಾದ ಶಿವರಾಮ ರೈ ಕಜೆ ಮಾತನಾಡಿ, ಶಶಿಧರ ರಾವ್ ಅವರು ನಮ್ಮ ಊರಿಗೆ ಖಾವಂದರು. ನಾನು ನಿಜವಾಗಿ ಲಾಸ್ಟ್ ಬೆಂಚ್ ವಿದ್ಯಾರ್ಥಿ, ಆದರೂ ನಾನು ಇಂದು ನಿಮ್ಮ ಮುಂದೆ ಬಂದು ಧೈರ್ಯದಿಂದ ಮಾತನಾಡಬೇಕಾದರೆ ಅದಕ್ಕೆ ಮೂಲ ಕಾರಣ ಮತ್ತು ನನ್ನಲ್ಲಿ ಅತೀವ ಧೈರ್ಯ ತುಂಬಿದವರು ಶಶಿಧರ ರಾವ್ ಅವರು ಎಂದರು.
ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಬು ಪಾಟಾಲಿ ದೇರ್ಲ ಮಾತನಾಡಿ, ಶಶಿ ಅಣ್ಣ ಅವರು ನನ್ನ ರಾಜಕೀಯ ಗುರು. ಅಲ್ಲದೆ ದೇವಸ್ಥಾನದ ಯಾವುದೇ ಅಗತ್ಯ ಕೆಲಸದ ಖರ್ಚು ವೆಚ್ಚ ಇದ್ದರೂ ಸಹ ತಾವೇ ಸ್ವತಃ ಭರಿಸಿ ನಮಗೆ ಯಾವುದೇ ಹೊರೆಯಾಗದಂತೆ ನಮ್ಮನ್ನು ಅವರ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮಾತೃ ಹೃದಯದವರು ಅಂತಹ ವಿಶೇಷ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೇಯಾದರೂ ಅವರ ಅತ್ಮ ನಮ್ಮ ಹೃದಯದಲ್ಲಿ ಸದಾ ಇರುತ್ತದೆ ಎಂದರು.
ಹಿರಿಯರಾದ ರಮೇಶ್ ರೈ ಅಬ್ಬೆಜಾಲು ಮಾತನಾಡಿ, ಶಶಿಧರ ರಾವ್ ಅವರ ಅಂತಿಮ ದಿನದಂದು ಸೇರಿದ ಜನಸ್ತೋಮವೇ ಸಾಕ್ಷಿ ಅವರ ವ್ಯಕ್ತಿತ್ವಕ್ಕೆ ಮತ್ತು ವಿಶಾಲ ಹೃದಯಕ್ಕೆ ಎಂದು ನುಡಿದರು.
ಚಂದ್ರಹಾಸ ರೈ ಬೊಳಿಕ್ಕಲ ಅವರು ಮಾತನಾಡಿ, ಶಶಿಧರ ರಾವ್ ಅವರ ಪಾದರಸದಂತ ವ್ಯಕ್ತಿತ್ವ, ಅವರು ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರರಾಗಿದ್ದರು ಎಂದು ಹೇಳಿದರು.
ಶಕ್ತಿಕೇಂದ್ರದ ಅಧ್ಯಕ್ಷರಾದ ಶರತ್ ಕುಮಾರ್ ರೈ ದೇರ್ಲ ಮಾತನಾಡಿ, ಶಶಿಧರ ರಾವ್ ಅವರು ನನ್ನ ರಾಜಕೀಯ ಗುರುಗಳು. ನನ್ನ ರಾಜಕೀಯದ ಪ್ರತಿಯೊಂದು ಮಜಲಿಗೂ ಇವರು ನನಗೆ ಸ್ಪೂರ್ತಿ ಮತ್ತು ಧೈರ್ಯ ತುಂಬಿದವರು ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಎಸ್ ಭಂಡಾರಿ, ವಿಜಯ ಕುಮಾರ್, ಮೀನಾಕ್ಷಿ ವಿ ರೈ, ತಾರಾನಾಥ ಕಂಪ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಸಣಂಗಲ, ಊರ ಮಹನೀಯರಾದ ದಿವಾಕರ ರೈ ಸಣಂಗಲ, ಪುತ್ತೂರು ನಗರ ಕಾರ್ಯದರ್ಶಿ ಸಂತೋಷ್ ರೈ ಕೈಕಾರ, ಸತೀಶ್ ರೈ ಕೆಯ್ಯೂರು, ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಆಳ್ವ ಇಳಂತಾಜೆ, ಮಾಜಿ ಬೂತ್ ಅಧ್ಯಕ್ಷರಾದ ಜಯರಾಮ ಶೆಟ್ಟಿ ಇಳಂತಾಜೆ, ಮಾಜಿ ಸೈನಿಕರಾದ ರಮೇಶ್ ರೈ ಅಬ್ಬೆಜಾಲು, ಲೀಲಾವತಿ ರೈ ಕೊಡಂಬು, ರಾಜೇಶ್ ರೈ ಕೊಡಂಬು, ಶಿವರಾಮ ರೈ ಕಜೆ, ಎಕೆ ಚಂದ್ರಹಾಸ ರೈ , ರಮಾನಾಥ ರೈ ಕೊಡಂಬು, ಸತೀಶ್ ರೈ ದೇರ್ಲ, ಶೀನಪ್ಪ ರೈ ದೇರ್ಲ, ಅನಿಲ್ ರೈ ದೇರ್ಲ, ಬಾಲಕೃಷ್ಣ ರೈ ನೆಟ್ಟಾಳ, ವಿಶ್ವನಾಥ ಪೂಜಾರಿ ಬೊಳಿಕ್ಕಲ, ದಿವಾಕರ ರೈ, ಸುರೇಶ್ ಗೌಡ ದಂಬೆತ್ತಡ್ಕ, ವಾಸಪ್ಪ ಗೌಡ ದಂಬೆತ್ತಡ್ಕ, ರಾಮಚಂದ್ರ ನಾಯ್ಕ ಕಾಪುತ್ತಡ್ಕ, ರಂಜಿತ್ ಗೌಡ ಕೈತ್ತಡ್ಕ, ಚೇತನ್ ಕುಮಾರ್ ದೇರ್ಲ, ಜತ್ತಪ್ಪ ರೈ ಚಾವಡಿತ್ತರು, ಚಿನ್ನಪ್ಪ ಗೌಡ, ಮೋಹನ್ ರೈ ಬೇರಿಕೆ, ಮಾಯಿಲ ಅಜಲಾಯ, ರಘುನಾಥ ಗೌಡ ಕೆಯ್ಯೂರು, ಆನಂದ್ ಕೆಯ್ಯೂರು, ಚಂದ್ರಹಾಸ ರೈ ಬೊಳಿಕ್ಕಲ, ಕೇಶವ ಬೊಳಿಕ್ಕಲ, ವಿಶ್ವ ಹಿಂದೂ ಪರಿಷತ್ತಿನ ಸದಸ್ಯರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮತ್ತು ಇತರ ಗಣ್ಯರು ಭಾಗವಹಿಸಿ ಸಂತಾಪ ಸೂಚಿಸಿದರು.
ಶರತ್ ಕುಮಾರ್ ರೈ ದೇರ್ಲ ಸ್ವಾಗತಿಸಿದರು. ಪುತ್ತೂರು ತಾಲೂಕು ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾದ ರವಿಕುಮಾರ್ ಕೈತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಕೆಯ್ಯೂರು ಬಿಜೆಪಿ 199ನೇ ವಾರ್ಡ್ ಅಧ್ಯಕ್ಷ ಪ್ರಮೀತ್ ರಾಜ್ ಕಟ್ಟತ್ತಾರು ವಂದಿಸಿದರು.