ಸಿ ಎ ಎಸ್ ಎಸ್ ನಾಯಕ್, ಮಂಗಳೂರು ಇವರ ಮಾರ್ಗದರ್ಶನದಲ್ಲಿ ಸುದ್ದಿ ಬಿಡುಗಡೆ ಪುತ್ತೂರಿನ ದಿನ ಪತ್ರಿಕೆಯಲ್ಲಿ ಪ್ರತೀ ಭಾನುವಾರ“ಸುದ್ದಿ ಮನಿ “
“ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ? ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ” ಭಗವದ್ಗೀತೆ ಅಧ್ಯಾಯ 4, ಶ್ಲೋಕ 38
ಈ ಲೋಕದಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವಾದದ್ದು ಯಾವುದೂ ಇಲ್ಲ.
“ಆನೋಭದ್ರಾಃಕ್ರತವೋಯಂತುವಿಶ್ವತಃ ” ಎಲ್ಲೆಡೆಯಿಂದಲೂ ಉತ್ತಮ, ಹಿತಕರ ಮತ್ತು ಶ್ರೇಯಸ್ಕರ ವಿಚಾರಗಳು ನಮ್ಮೊಳಗೆ ಬರಲಿಎಂಬುದು ಋಗ್ವೇದದ ತತ್ವ . .
ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಸಣ್ಣ ಉದ್ಯಮ , ಎಂಎಸ್‌ಎಂಇ ಗಳ ಪಾತ್ರ ಕೃಷಿಯಷ್ಟೇ ಪ್ರಧಾನವಾದುದು . ದೇಶದ ಜಿ ಡಿ ಪಿ ಕೊಡುಗೆಯ ಶೇ 30 ರಷ್ಟು ಎಂಎಸ್‌ಎಂಇಯಿಂದ, ಕೃಷಿಯಿಂದಜಿಡಿಪಿಕೊಡುಗೆಶೇ 17ರಷ್ಟು, ದೇಶದಒಟ್ಟು ರಫ್ತಿನಲ್ಲಿ ಶೇ 45 ಎಂಎಸ್‌ಎಂಇಗಳಿಂದ , ಶೇ.12ರಷ್ಟು ಕೃಷಿ ಉತ್ಪನ್ನಗಳಿಂದ ಆಗಿರುತ್ತದೆ.
ಚಾಣಕ್ಯ ನೀತಿ ಯಲ್ಲಿ ಹೇಳಿದಂತೆ ವಿತ್ತೇನ ಹೀನಂ ಪುರುಷಂ ತ್ಯಜಂತಿ ಸ್ವಜನಾ ಅಪಿ ದುರ್ದಶಂ ದರ್ಶಯಂತಿ? ಧನವಿಲ್ಲದ ಮನುಷ್ಯನನ್ನು ಜನರು ತ್ಯಜಿಸುತ್ತಾರೆ. ಸ್ವಂತ ಬಂಧು ಬಾಂಧವರೂ ಕೂಡ ಅವನ ದುಸ್ಥಿತಿಯನ್ನು ನೋಡಿ ತಿರಸ್ಕರಿಸುತ್ತಾರೆ. ಧನಹೀನನಾದವನು ತನ್ನ ಗುಣ, ಜ್ಞಾನ, ಅಥವಾ ಪ್ರಾಮಾಣಿಕತೆಯಿಂದಲೇ ಗೌರವವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಾನೆ. ಆರ್ಥಿಕ ಬಲವು ಸಮಾಜದಲ್ಲಿ ಸ್ಥಾನಮಾನ ಮತ್ತು ಗೌರವವನ್ನು ಕಾಪಾಡಿಕೊಳ್ಳಲು ಅಗತ್ಯವೆಂದು ಚಾಣಕ್ಯನ ಅಭಿಪ್ರಾಯ.
ಪ್ರಸ್ತುತ ವಿದ್ಯಮಾನಗಳಾದ ಹಣಕಾಸು , ಹೂಡಿಕೆ , ಆಸ್ತಿ ವ್ಯವಹಾರ , ಉದ್ಯಮ ಶೀಲತೆ , ಕೇಂದ್ರ / ರಾಜ್ಯ ಬಜೆಟ್ , ಬ್ಯಾಂಕಿಂಗ್ , ಇನ್ಶೂರೆನ್ಸ್ , ಬ್ಯುಸಿನೆಸ್ , ಸ್ಟಾರ್ಟ್ ಅಪ್ , ಜಿಎಸ್ ಟಿ , ಇನ್ಕಮ್ ಟ್ಯಾಕ್ಸ್ , ಷೇರು ಮಾರುಕಟ್ಟೆ , ಮ್ಯೂಚುವಲ್ ಫಂಡ್ , ವೇಸ್ಟ್ ಮ್ಯಾನೇಜ್ಮೆಂಟ್ , ಇಂಪೋರ್ಟ್ ಎಕ್ಸ್ಪೋರ್ಟ್ , ಕೃಷಿ ಆಧಾರಿತ ಕೈಗಾರಿಕಾ , ಪ್ರವಾಸೋದ್ಯಮ , ಮೀನುಗಾರಿಕೆ Fiscal Policies, Tariff , ಚಿನ್ನ ಬೆಳ್ಳಿ ಮಾರುಕಟ್ಟೆಬಗ್ಗೆ ನುರಿತ ತಜ್ಞರಿಂದ ಲೇಖನಗಳನ್ನು ಪ್ರಕಟಿಸಲಾಗುವುದು .
ಈ ಎಲ್ಲಾ ಕ್ಷೇತಗಳ ಬೆಳವಣಿಗೆಗೆ ಭಾರತದಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿದೆ . ಸಾಲ ಸೌಲಭ್ಯಗಳು , ಯೋಜನೆಗಳು , ಕೇಂದ್ರ ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಮತ್ತು ಪ್ರೋತ್ಸಾಹಗಳು , ನೀತಿ ನಿರೂಪಣೆಗಳು ಆಗಾಗ ಘೋಷಣೆ ಆಗುತ್ತಲಿವೆ . ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ಮಂಡನೆ ಮಾಡುತ್ತಲಿವೆ. ಹೀಗೆ ಅನೇಕ ಆರ್ಥಿಕ , ಕಾನೂನು , ಹಣಕಾಸು ಮತ್ತು ಇತರ ಯೋಜನೆಗಳ ಬಗ್ಗೆ ಮಾಹಿತಿಯ ಸುದ್ದಿಯನ್ನು ಬಿತ್ತರಿಸುವ ಸಂಚಿಕೆಗಳ ಸರಮಾಲೆಯೇ “ ಸುದ್ದಿ ಮನಿ “. ಇದರ ಬಗ್ಗೆ ಸಮಗ್ರ ಮಾಹಿತಿ ಪ್ರತೀ ಭಾನುವಾರ ತಪ್ಪದೆ ಓದಿರಿ . ನಿಮ್ಮ ಸಮಗ್ರ ಜ್ಞಾನವನ್ನು ಅಭಿವೃದ್ಧಿಗೊಳಿಸಿರಿ .
ಸಿ ಎ ಎಸ್ ಎಸ್ ನಾಯಕ್, ಮಂಗಳೂರು
ಎಂಎಸ್‌ಎಂಇ ಹಾಗೂ ಸ್ಟಾರ್ಟ್ ಅಪ್ ಮೆಂಟರ್ ಮತ್ತು ಬ್ಯುಸಿನೆಸ್ ಕೋಚ್, ಮಾರ್ಗದರ್ಶಕರು ಹಾಗೂ ಪ್ರಧಾನ ಸಲಹೆಗಾರರು
ಇವರು ಕಳೆದ ಮೂರು ದಶಕಗಳಿಂದ ಸಾವಿರಾರು ಉದ್ಯಮಿಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರ ನಿರ್ದೇಶನದಲ್ಲಿ ಭಾರತದಾದ್ಯಂತ ೧೪ ಎಂ.ಎಸ್.ಎಂ.ಇ ಕಾನ್ ಕ್ಲೆವುಗಳು ಯಶಸ್ವಿಯಾಗಿ ಜರುಗಿ ಅಪಾರ ಜನ ಮನ್ನಣೆ ಪಡೆದಿದೆ.
ಸುದ್ದಿ ಮನಿ ಅಂಕಣಕ್ಕೆ ಮಾಹಿತಿ ನೀಡುವ ತಜ್ಞ ಲೇಖಕರ ಪರಿಚಯ
ಸಿ ಎ ರುದ್ರಮೂರ್ತಿ
ಅಮೆಝಾನನನಂ.1 ಮಾರಾಟವಾಗಿರುವ “ಮೈಂಡ್, ಮಾರ್ಕೆಟ್ ಅಂಡ್ ಮನಿ” ಪುಸ್ತಕದ ಲೇಖಕರಾದ ಇವರು ವಿಶ್ವದಾದ್ಯಂತ ಓದುಗರನ್ನು ಹೊಂದಿದ್ದಾರೆ. ಹೂಡಿಕೆ ಮತ್ತು ಟ್ರೇಡಿಂಗ್ ಕ್ಷೇತ್ರದಲ್ಲಿ 1,೦೦,೦೦೦ಕ್ಕೂ ಹೆಚ್ಚು ನೈಜ ವ್ಯಾಪಾರಿಗಳು ಹಾಗೂ ಹೂಡಿಕೆದಾರರಿಗೆ ತರಬೇತಿ ನೀಡಿದ್ದಾರೆ. ಬೆಂಗಳೂರಿನ ಪ್ರಮುಖ ಶೇರು ದಲಾಲಿ ಸಂಸ್ಥೆಯಾದ ವಚನ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ನಿರ್ದೇಶಕ ಹಾಗೂ ಸಂಶೋಧನಾ ಮುಖ್ಯಸ್ಥರಾಗಿದ್ದಾರೆ. ಇವರು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಅಮೆರಿಕಾದ IFTA ಸಂಸ್ಥೆಯಿಂದ CFT ಲೆವೆಲ್ 1 ಪದವೀಧರರಾಗಿದ್ದಾರೆ. ಇವರ ಮಾರುಕಟ್ಟೆ ಅಭಿಪ್ರಾಯಗಳನ್ನು Wall Street Post, Bloomberg, Reuters, Moneycontrol, Economic Times ಮುಂತಾದ ಅಂತರಾಷ್ಟ್ರೀಯ ಮಾಧ್ಯಮಗಳು ಉಲ್ಲೇಖಿಸುತ್ತವೆ.
ಡಾ. ಎಸ್ ಎಂ ಶಿವಪ್ರಕಾಶ್
ಫಾರ್ಮರ್ ಡೀನ್ , College of Fisheries ,ಮಂಗಳೂರು
ಡಾ. ಎಸ್. ಎಂ. ಶಿವಪ್ರಕಾಶ ಅವರು ಮೀನುಗಾರಿಕಾ ವಿಜ್ಞಾನ ಕ್ಷೇತ್ರದಲ್ಲಿ ಖ್ಯಾತ ತಜ್ಞರು ಹಾಗೂ ಮಾಜಿ ಡೀನ್, ಮೀನುಗಾರಿಕಾ ಕಾಲೇಜು, ಮಂಗಳೂರಾಗಿದ್ದಾರೆ. ಅವರು ನಾರ್ವೇ, ಯುಕೆ ಮತ್ತು ಕೆನಡಾದಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ತರಬೇತಿಯನ್ನು ಪಡೆದಿದ್ದು, ಅನೇಕ ಪುಸ್ತಕಗಳ ಲೇಖಕರಾಗಿದ್ದಾರೆ. ಮೀನುಗಾರಿಕೆ ಕ್ಷೇತ್ರದ ವಿಸ್ತರಣಾ ಚಟುವಟಿಕೆಗಳಲ್ಲಿ ಹಾಗೂ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಡಾ. ಜ್ಞಾನೇಶ್ವರ ಪೈ ಮಾರೂರು
ಪ್ರಾಂಶುಪಾಲರು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್, ಮಂಗಳೂರು
ಡಾ. ಜ್ಞಾನೇಶ್ವರ ಪೈ ಮಾರೂರು ಅವರು ಅನುಭವಸಂಪನ್ನ ಅಕಾಡೆಮಿಷಿಯನ್ ಮತ್ತು ಆಡಳಿತ ತಜ್ಞರು. ಅವರು ವ್ಯವಹಾರ ನಿರ್ವಹಣೆಯಲ್ಲಿ ಎಂ.ಬಿ.ಎ., ಎಂ.ಫಿಲ್., ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದು, 21 ವರ್ಷಗಳ ಕೈಗಾರಿಕಾ, ಅಕಾಡೆಮಿಕ್ ಮತ್ತು ಸಂಶೋಧನಾ ಅನುಭವ ಹೊಂದಿದ್ದಾರೆ. ಜೆ.ಪಿ.ಮಾರ್ಗನ್ ಚೇಸ್ ಬ್ಯಾಂಕ್ ನಲ್ಲಿ ಭಾರತ ಮತ್ತು ಅಮೇರಿಕಾ ಕಚೇರಿಗಳಲ್ಲಿ ಹಾಗೂ ಜಸ್ಟಿಸ್ ಕೆ.ಎಸ್. ಹೆಗ್ಡೆ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಮತ್ತು ನಿಟ್ಟೆ ಎಂ.ಎ.ಎಂ ತಾಂತ್ರಿಕ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಶೈಕ್ಷಣಿಕ ಶ್ರೇಷ್ಠತೆ, ಕೈಗಾರಿಕಾ ಸಹಭಾಗಿತ್ವ ಮತ್ತು ನವೀನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ.
ಸಿ ಎ ಪ್ರತಿಕ್ಷಾ ಪೈ
ಪ್ರವರ್ತಕರು , ಫಿಂಟೆಲಿಜೆಂಟ್ ಇನ್ವೆಸ್ಟರ್ ,Youtube Channel ಬೆಂಗಳೂರು ಹಾಗೂ ಸ್ಟಾರ್ಟ್ ಅಪ್ ಮೆಂಟರ್
ಪ್ರತೀಕ್ಷಾ ಪೈ ಅವರು ಚಾರ್ಟರ್ಡ್ ಅಕೌಂಟೆಂಟ್ (ACA) ಆಗಿದ್ದು, ಪ್ರಸ್ತುತ ಎರ್ಸ್ಟ್ &ಯಂಗ್ ಎಲ್‌ಎಲ್ಪಿ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಸಿಐಎಐ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷೆಯಾಗಿದ್ದ ಅವರು ವಾದ-ವಿವಾದ, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಭಾಷಣಕೌಶಲ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಅವರು ಬಹುಭಾಷಾ ಪಾಂಡಿತ್ಯ ಹಾಗೂ ಸಾರ್ವಜನಿಕ ಸಂವಹನ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ.
ಡಾ. ಚಂದ್ರಕಾಂತ ಭಟ್
ಪ್ರವರ್ತಕರು , NRI Money Clinic, Dubai / India
ಡಾ. ಚಂದ್ರಕಾಂತ ಭಟ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಹೂಡಿಕೆ ಸಲಹೆಗಾರರು ಹಾಗೂ ಹಣಕಾಸು ಯೋಜಕರಾಗಿದ್ದಾರೆ. ಅವರು ದುಬೈಮತ್ತು ಭಾರತದಿಂದ NRI ಸಮುದಾಯದ ಸಾವಿರಾರು ಕುಟುಂಬಗಳ ಹಣಕಾಸು ಯೋಜನೆ ನೋಡಿಕೊಳ್ಳುತ್ತಿದ್ದಾರೆ. ಮಾಜಿ ಪಶುವೈದ್ಯರಾಗಿರುವ ಡಾ. ಭಟ್ ಅವರು NRI Money Clinic ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ಹಣಕಾಸು ಮತ್ತು ತೆರಿಗೆ ವಿಷಯಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಡಾ. ಶಿವಕುಮಾರ್ ಮಗದ
ಪ್ರೊಫೆಸರ್ ಒಫ್ ಅಕ್ವಾಟಿಕ್ ಬಯಾಲಜಿ College of Fisheries , ಮಂಗಳೂರು
ಡಾ. ಶಿವಕುಮಾರ್ ಎಂ. ಅವರು ಜಲಜ ಜೀವಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ವಿಸ್ತರಣಾ ಶಿಕ್ಷಣದ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಅಕ್ವಾಕಲ್ಚರ್ ಕ್ಷೇತ್ರದಲ್ಲಿ 25 ವರ್ಷಗಳ ಅಧ್ಯಾಪನ, ಸಂಶೋಧನೆ ಮತ್ತು ವಿಸ್ತರಣಾ ಅನುಭವ ಹೊಂದಿದ್ದು, ಪರಿಸರ ಸಂರಕ್ಷಣೆಯತ್ತ ಬದ್ಧರಾಗಿದ್ದಾರೆ. ಡಾ. ಶಿವಕುಮಾರ್ ಅವರಿಗೆ ಡಾ. ಅಬ್ದುಲ್ ಕಲಾಂ ಜೀವನ ಸಾಧನೆ ಪ್ರಶಸ್ತಿ ಮತ್ತು ನ್ಯಾಷನಲ್ ಚಾಣಕ್ಯ ಅವಾರ್ಡ್ ಸೇರಿದಂತೆ ಹಲವು ಗೌರವಗಳು ಲಭಿಸಿವೆ.
ರಾಜೇಶ್ ರಾವ್ ಎಂ
ಕೆನರಾ ಬ್ಯಾಂಕಿನಲ್ಲಿ ಸುಮಾರು 3 ದಶಕಗಳ ಶ್ರೀಮಂತ ಅನುಭವವಿದೆ. ಅವರು ನಮ್ಮ ಕುಡ್ಲ ಬಿಸಿನೆಸ್ ಟಾನಿಕ್‌ನಲ್ಲಿ ಕೇಂದ್ರ ಬಜೆಟ್, ರಾಜ್ಯ ಬಜೆಟ್, ಭಾರತೀಯ ಆರ್ಥಿಕತೆ, ಜಾಗತಿಕ ಆರ್ಥಿಕತೆ ಭಾರತದಲ್ಲಿ ಎಂಎಸ್‌ಎಂಇ ಪರಿಸರ ವ್ಯವಸ್ಥೆ, ಭೌಗೋಳಿಕ ರಾಜಕೀಯ ಸಮಸ್ಯೆಗಳು, ಬ್ಯಾಂಕಿಂಗ್ ವಿಷಯಗಳು ಮುಂತಾದ ವಿಷಯಗಳ ಕುರಿತು ನಿಯಮಿತವಾಗಿ ಕಾಣಿಸಿಕೊಳ್ಳುತ್ತಾರೆ.
ಸಿ.ಎ. ಅನಿಲ್ ಭಾರದ್ವಾಜ್
ತೆರಿಗೆ ತಜ್ಞರು, ಬೆಂಗಳೂರು
ಸಿ.ಎ. ಅನಿಲ್ ಭಾರದ್ವಾಜ್ ಅವರು ಪ್ರಸಿದ್ಧ ಲೆಕ್ಕಪತ್ರ ತಜ್ಞರು ಮತ್ತು ಭಾರದ್ವಾಜ್ ಅಂಡ್ ಹೋಸ್ಮಟ್ ಸಂಸ್ಥೆಯ ಸ್ಥಾಪಕ ಸಹಭಾಗಿಯಾಗಿದ್ದಾರೆ. ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಿಂದ ವ್ಯವಹಾರ ಕಾನೂನುಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹಾಗೂ ಜಿಎಸ್ಟಿ ವಿಷಯದ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ತೆರಿಗೆ ವಿಷಯಗಳನ್ನು ಸುಲಭವಾಗಿ ವಿವರಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಅವರು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಜಾಗೃತಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಜೊತೆಗೆ ವೇದಿಕೆ ಕಲಾವಿದ ಹಾಗೂ ಗಮಕ ಕಲಾವಿದರಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ.
ಡಾ. ಎ ಪಿ ಆಚಾರ್
ಸಿ ಇ ಓ , ಅಟಲ್ ಇನ್ಕ್ಯುಬೇಷನ್ ಸೆಂಟರ್ ನಿಟ್ಟೆ
ಡಾ ಎ ಪಿ ಆಚಾರ್ ರವರನ್ನು ಕೇಂದ್ರ ಸರಕಾರದ ನೀತಿ ಆಯೋಗದಿಂದ ಪ್ರಾಯೋಜಿತ ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್ ನ ಸಿಇಓ ಆಗಿ ಕಳೆದ ೫ ವರ್ಷಗಳಿಂದ ೧೫೦ ಕ್ಕೂ ಹೆಚ್ಚು ಉದ್ಯಮಿಗಳಿಗೆ ನವೋದ್ಯಮ ಪ್ರಾರಂಭಿಸಲು ಮಾಹಿತಿ, ಮಾರ್ಗ ದರ್ಶನ, ತರಬೇತಿ ಹಾಗೂ ಹಣಕಾಸಿನ ನೆರವು ನೀಡಿರುತ್ತಾರೆ ಹಾಗೂ ಅನೇಕ ನವೋದ್ಯಮಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹ ನೀಡಿರುತ್ತಾರೆ.
ಸಾಣೂರು ನರಸಿಂಹ ಕಾಮತ್
ರಾಜ್ಯ ಪ್ರಧಾನ ಕಾರ್ಯದರ್ಶಿ, ಸಹಕಾರ ಭಾರತಿ, ಕರ್ನಾಟಕ
ಸಾಣೂರು ನರಸಿಂಹ ಕಾಮತ್ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಶಿಕ್ಷಣ ಪಡೆದ, ಶ್ರೇಯಸ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಸ್ಥಾಪಕರಾಗಿದ್ದು, ಮೂರು ದಶಕಗಳಿಂದ ಗ್ರಾಮೀಣ ಉದ್ಯಮಶೀಲತೆ ಮತ್ತು ಗ್ರಾಮಾಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪಡೆದಿದ್ದು, ಸಾಣೂರು ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅಂತರಾಷ್ಟ್ರೀಯ ಹಾಗೂ ರಾಷ್ಟ್ರಪತಿಗಳ ಗ್ರಾಮಾಭಿವೃದ್ಧಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಲು ಉತ್ಪಾದನೆ, ಸಹಕಾರಿ ಸಂಘಗಳು, ಸಾವಯವ ಕೃಷಿ, ಪರಿಸರ ಮತ್ತು ಸಾರ್ವಜನಿಕ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ಅವರು ಉತ್ಸಾಹಿ ಕಾರ್ಯಕರ್ತರಾಗಿದ್ದು, ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಿ ಎ ಸಂಕೇತ್ ಎಸ್ ನಾಯಕ್
ಆರ್ಥಿಕ ತಜ್ಞರು ಬೆಂಗಳೂರು ,
ಸಿ ಎ ಸಂಕೇತ್ ಎಸ್ ನಾಯಕ್ ಬೆಂಗಳೂರು ನಗರದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಹಣಕಾಸು ತಜ್ಞರು. ಅಂತರರಾಷ್ಟ್ರೀಯ ತೆರಿಗೆ, ಮೌಲ್ಯಮಾಪನ ಮತ್ತು ನಿಧಿ ಸಂಗ್ರಹಣಾ ಸೇವೆಗಳಲ್ಲಿ ಪರಿಣತಿ ಹೊಂದಿರುವ ಅವರು, ಸಿಪಿಎ (ಅಮೆರಿಕಾ) ಹಾಗೂ ನೋಂದಾಯಿತ ಮೌಲ್ಯಮಾಪಕರಾಗಿದ್ದಾರೆ. “ಬಿಸಿನೆಸ್ ಟಾನಿಕ್” ಮತ್ತು “ದಿ ಫಿಂಟೆಲಿಜೆಂಟ್ ಇನ್ವೆಸ್ಟರ್” ಮುಂತಾದ ವೇದಿಕೆಗಳಲ್ಲಿ ಹಣಕಾಸು ಹಾಗೂ ತೆರಿಗೆ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.
ಮೂರೂರುರಮೇಶ್ಚಂದ್ರಪ್ರಭು
ಬ್ಯಾಂಕಿಂಗ್ ತಜ್ಞರು, ನಿರ್ವತ ಬ್ಯಾಂಕ್ ಅಧಿಕಾರಿ
35 ವರ್ಷಗಳ ಕಾಲ ಕಾರ್ಪೊರೇಟ್ ಬ್ಯಾಂಕ್’ ಹಾಗೂ ಯೂನಿಯನ್ ಬ್ಯಾಂಕ್ ನಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ . ಉಪ ಮಹಾ ಪ್ರಬಂಧಕರಾಗಿ ನಿರ್ವತ್ತಿ ಹೊಂದಿ ಪ್ರಸ್ತುತ ಲೇಖಕರಾಗಿ ಹವ್ಯಾಸ ಮಾಡಿಕೊಂಡಿದ್ದಾರೆ.
ಈ ಅಂಕಣದ ಪ್ರಾಯೋಜಕತ್ವ ಸುದ್ದಿ ಮಾಹಿತಿ ಟ್ರಸ್ಟ್ ಪುತ್ತೂರು ಮತ್ತು ಸುದ್ದಿ ಅರಿವು ಕೇಂದ್ರದ ವತಿಯಿಂದ ದೊರೆಯಲಿದ್ದು, ಮುಂದಕ್ಕೆ ಸುದ್ದಿ ಚಾನೆಲ್‌ನಲ್ಲಿ ಈ ಕಾರ್ಯಕ್ರಮದ ಮತ್ತು ತಜ್ಞರ ಅಭಿಪ್ರಾಯಗಳನ್ನು ನೇರ ಪ್ರಸಾರವನ್ನು, ಪ್ರಶ್ನೋತ್ತರಗಳನ್ನು ನೀಡಲಾಗುವುದು. ಅಭಿಪ್ರಾಯ ನೀಡುವವರು
ಸುದ್ದಿ ಅರಿವು ಕೇಂದ್ರ ಮೊ 8050293990, ಇ ಮೇಲ್: arivuputtur@gmail.com ಸುದ್ದಿ ಮಾಹಿತಿ ಟ್ರಸ್ಟ್‌ನ್ನು ಸಂಪರ್ಕಿಸಬಹುದು.