ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 17ನೇ ಸೇವೆ ‘ಪಾರ್ಥಸಾರಥ್ಯ’ ಯಕ್ಷಗಾನ ತಾಳಮದ್ದಳೆ ಅ.25ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಶಿವಜಿತ್ ವೈ.ಜೆ., ಮುಮ್ಮೆಳದಲ್ಲಿ ಗೀತಾ ಕುದ್ವಣ್ಣಾಯ ಕರಾಯ, ಗೋಪಾಲ ಭಟ್ ನೈಮಿಷ (ಕೃಷ್ಣ), ರಾಮ್‌ಪ್ರಸಾದ್ ಆಲಂಕಾರು, ಜನಾರ್ದನ ಸುರಿಯ (ಅರ್ಜುನ), ಹರಿಶ್ಚಂದ್ರ ಗೌಡ ಕೋಡ್ಲ, ರಾಮ್ ಪ್ರಕಾಶ್ ಕೊಡಂಗೆ (ಕೌರವ), ಜಯರಾಂ ಗೌಡ ಬಲ್ಯ, ನಾರಾಯಣ ಭಟ್ ಆಲಂಕಾರು (ಬಲರಾಮ) ಸಹಕರಿಸಿದರು. ಶ್ರೀನಿವಾಸ ರಾವ್ ಶರವೂರು ಬೆಂಗಳೂರು ಸೇವಾರ್ಥಿಯಾಗಿ ಸಹಕರಿಸಿದರು.
ಶ್ರೀ ದುರ್ಗಾಂಬಾ ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ಕೋಶಾಧಿಕಾರಿ ರಾಮ್‌ಪ್ರಸಾದ್ ಆಲಂಕಾರು ವಂದಿಸಿದರು. ಇತ್ತೀಚೆಗೆ ನಿಧನರಾದ ಗಾನಕೋಗಿಲೆ ದಿ| ದಿನೇಶ್ ಅಮ್ಮಣ್ಣಾಯ ಇವರಿಗೆ ಗೋಪಾಲ ಭಟ್ ನೈಮಿಷ ನುಡಿನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷದ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
