ಮಜಲು ಕ್ಷೇತ್ರದಲ್ಲಿ ಕೊರಗಜ್ಜ ದೈವದ ಹಗಲು ಕೋಲೋತ್ಸವ, ಅಗೇಲು ಸೇವೆ

0

ಪುತ್ತೂರು:ಕಲಿಯುಗ ಕಲೆಕಾರಣಿಕ ಇತಿಹಾಸ ಪ್ರಸಿದ್ಧ, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ,ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಅ.26ರಂದು ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲೋತ್ಸವ,ಅಗೇಲು ಸೇವೆ ನಡೆಯಿತು.


ಬೆಳಿಗ್ಗೆ ಗಂಟೆ 7ಕ್ಕೆ ಗಣಪತಿ ಹೋಮ ನಡೆಯಿತು.ಬಳಿಕ ಅಗ್ನಿ ಕಲ್ಲುರ್ಟಿ ತಾಯಿಯ ಕೆಂಡ ಸೇವೆ,ಅಗೇಲು ಸೇವೆ,ರಕ್ಷೆ ಕೊಡುವುದು ನಡೆಯಿತು.ಮಧ್ಯಾಹ್ನ ಗಂಟೆ 12ರಿಂದ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲೋತ್ಸವ ಚೆಂಡೆ,ಕೊಂಬು,ಡೋಲು,ನಾಗಸ್ವರ ವಾದನಗಳೊಂದಿಗೆ ವಿಜ್ರಂಭಣೆಯಿಂದ ನಡೆದು ಅಗೇಲು ಸೇವೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಒಂದು ಸಾವಿರಕ್ಕೂ ಅಽಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.


ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಕೊರಗಜ್ಜ ದೈವದ ಕೋಲ,ಅಗ್ನಿ ಕಲ್ಲುರ್ಟಿ ಕೆಂಡ ಸೇವೆ,ಕೋಲ,ಅಗೇಲು ಸೇವೆ ಅನ್ನಸಂತರ್ಪಣೆ ನಡೆಯಲಿದೆ.ಪ್ರತಿ ಆದಿತ್ಯವಾರ ಮಧ್ಯಾಹ್ನ ಗಂಟೆ ೧೨ರಿಂದ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ,ಅಗೇಲು ಸೇವೆ,ಅನ್ನಸಂತರ್ಪಣೆ ನಡೆಯಲಿದೆ.ಪ್ರತಿ ಸೋಮವಾರ,ಮಂಗಳವಾರ,ಶುಕ್ರವಾರ,ಶನಿವಾರ ಬೆಳಿಗ್ಗೆಯಿಂದ ಪ್ರಶ್ನಾ ಚಿಂತನೆ, ಪ್ರತಿ ಬುಧವಾರ,ಗುರುವಾರ ಸೂಚಿತ ಪರಿಹಾರ ಕಾರ್ಯಕ್ರಮ ನಡೆಯುತ್ತದೆ ಎಂದು ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here