ಪುತ್ತೂರು : ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ ನಡೆದ ಪ್ರೋಟೋ ಕ್ವೆಸ್ಟ್ ಪ್ರೋಟೋ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳ ತಂಡವು ಉತ್ತಮ ಸಾಧನೆಗೈದಿದ್ದಾರೆ.

9ನೇ ತರಗತಿಯ ತುಷಾರ್ ಪಿ. ವಿ ( ವೀರಪ್ಪ ಗೌಡ .ಪಿ ಮತ್ತು ಭಾರತಿ ಕೆ. ದಂಪತಿ ಪುತ್ರ) , ನಿಕ್ಷೇಪ್ ಆರ್. ಶೆಟ್ಟಿ ( ರಾಮಣ್ಣ ಶೆಟ್ಟಿ ಎಂ. ಮತ್ತು ಕವಿತಾ ಆರ್. ಶೆಟ್ಟಿ ದಂಪತಿ ಪುತ್ರ), ಚಾರುದತ್ತ ಪಕ್ಕಳ ( ನಿತಿನ್ ಪಕ್ಕಳ ಮತ್ತು ಹಿತೈಷಿ ಎನ್ ಪಕ್ಕಳ ದಂಪತಿ ಪುತ್ರ) ಇವರು ಪ್ರೋಟೋ ಕ್ವೆಸ್ಟ್ ಪ್ರೋಟೋ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು ಹದಿನಾರು ಪ್ರಮುಖ ಪ್ರೊಜೆಕ್ಟ್ ಗಳಲ್ಲಿ, ನಾಲ್ಕು ಪ್ರೊಜೆಕ್ಟ್ ಗಳು ಆಯ್ಕೆಯಾಗಿರುತ್ತವೆ.
ಅವುಗಳಲ್ಲಿ ಈ ತಂಡದ ಪ್ರೊಜೆಕ್ಟ್ ನಾಲ್ಕನೇ ಸ್ಥಾನ ಪಡೆದು 2500 ರೂಪಾಯಿಗಳನ್ನು ನಗದು ರೂಪದಲ್ಲಿ ಹಣವನ್ನು ಬಹುಮಾನವಾಗಿ ಪಡೆದಿದೆ. ಇವರಿಗೆ ವಿಜ್ಞಾನ ಶಿಕ್ಷಕಿ ರಶ್ಮಿತಾ ಆರ್. ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.