ಪುರುಷರಕಟ್ಟೆ ಸರಸ್ವತಿ ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ “ಬನ್ನಿ” ಘಟಕದ ಉದ್ಘಾಟನೆ

0

ಪುತ್ತೂರು: ಸರಸ್ವತಿ ವಿದ್ಯಾ ಮಂದಿರ ಪುರುಷರಕಟ್ಟೆ ಇಲ್ಲಿನ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ “ಬನ್ನಿ” ಘಟಕವನ್ನು ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಉದ್ಘಾಟಿಸಿದರು.

ಹೂವಿನ ಕುಂಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜೀವನದ ಶಿಸ್ತು, ಸೃಜನಶೀಲತೆ ಮತ್ತು ಕ್ರಿಯಾ ಶೀಲತೆಗೆ “ಬನ್ನಿ” ಯಂಥ ಘಟಕದ ಅವಶ್ಯಕತೆ ಇದೆ ಎಂದು ಹೇಳಿದರು. “ಸರಸ್ವತಿ ಟಮ್ಟೋಲಾ” ಎಂಬ ಹೆಸರಿನಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳಿಗಾಗಿ ಈ ಘಟಕವನ್ನು ಆರಂಭಿಸಲಾಯಿತು.


ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್ ಇವರು ಬನ್ನಿ ಸಮವಸ್ತ್ರವನ್ನು ವಿತರಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಖಿಲಾ ಕೆ ಬಿ , ಪ್ರೌಢ ಶಾಲಾ ಶಿಕ್ಷಣ ಸಂಯೋಜಕರಾದ ದಿವ್ಯಾ ಹಾಗೂ ಪ್ರಾಥಮಿಕ ವಿಭಾಗದ ಶ್ರೀಲಕ್ಷ್ಮೀ ಮೊಳೆಯಾರ್ ಮತ್ತು ಶಾಲಾ ಕ್ಯಾಂಪಸ್ ಮೆನೇಜರ್ ಕೃಷ್ಣಪ್ಪ ಬಿ ಕೆ, ವಿದ್ಯಾರ್ಥಿ ನಾಯಕ ಜೀವಿತ್ ಉಪಸ್ಥಿತರಿದ್ದರು. ಎಲ್ ಕೆ ಜಿ ವಿದ್ಯಾರ್ಥಿ ಆನ್ಯ ಪ್ರಾರ್ಥನೆಗೈದರು. ಯು ಕೆ ಜಿ ವಿದ್ಯಾರ್ಥಿಗಳಾದ ದಿಯಾ ಮತ್ತು ಸಾಕೇತ್ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು. ಬನ್ನಿ ಮಾಸ್ಟರ್ ಶಿಕ್ಷಕಿ ತೇಜಸ್ವಿನಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಸ್ಕೌಟ್ ಮತ್ತು ಗೈಡ್ಸ್ ಘಟಕ ಹಾಗೂ ಕಬ್ ಮತ್ತು ಬುಲ್ ಬುಲ್ ಘಟಕದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here