ಪುತ್ತೂರು:ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳವು ಆಗಿರುವ ಕುರಿತು ಚಾರ್ವಾಕ ಮಂಟಮೆ ನಿವಾಸಿ ಸುನಂದ ಶೆಟ್ಟಿ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣಿಯೂರು ಬಾಳುಗೋಡು ಬಸ್ನಲ್ಲಿ ಕಾಣಿಯೂರಿಗೆ ಹೋಗುತ್ತಿದ್ದ ವೇಳೆ ಕುತ್ತಿಗೆಯಲ್ಲಿದ್ದ ರೂ.2 ಲಕ್ಷ ಮೌಲ್ಯದ ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿದೆ. ಚಿನ್ನದ ಸರ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲೇ ಕಳವಾಗಿರುವುದಾಗಿ ಸುನಂದ ಶೆಟ್ಟಿಯವರ ಪುತ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
