ಪುತ್ತೂರು:ಕೂಲಿ ಕಾರ್ಮಿಕರೊಬ್ಬರಿಗೆ ಈಶ್ವರಮಂಗಲ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಡಂಬಳಿಕೆ ನಿವಾಸಿ ಪುಟ್ಟ ಬೈರ ಅವರ ಪುತ್ರ ರಾಜಕುಮಾರ ಕೆ ಎಂಬವರು ಪ್ರಕಾಶ್ ಮಣಿಯಾಣಿ ಎಂಬವರ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
