ಕೊಳ್ತಿಗೆ:ವಿಷ ಪದಾರ್ಥ ಸೇವಿಸಿ ವ್ಯಕ್ತಿಯ ಸಾವು-ಪ್ರಕರಣ ದಾಖಲು

0

ಪುತ್ತೂರು:ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ನಿವಾಸಿ ಧರ್ಮ (62ವ.)ಎಂಬವರು ವಿಷಪದಾರ್ಥ ಸೇವನೆ ಮಾಡಿ ಸಾವಿಗೀಡಾಗಿರುವ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


‘ಅ.27ರಂದು ಸಂಜೆ ಸಮಯ 7 ಗಂಟೆಗೆ ಕುಡಿದು ಮನೆಗೆ ಬಂದಿದ್ದ ತಂದೆಯವರು ಮನೆಯಲ್ಲಿದ್ದ ಯಾವುದೋ ವಿಷಪದಾರ್ಥವನ್ನು ಸೇವಿಸಿ ಬಾಯಿಯಲ್ಲಿ ಲಾಲಾರಸ ಬಂದಿದ್ದು ಅಸ್ವಸ್ಥಗೊಂಡು ಬಿದ್ದವರನ್ನು ಮನೆಯಲ್ಲಿದ್ದ ಅತ್ತಿಗೆ ಮಮತಾರವರು ನೋಡಿ ಅಣ್ಣ ಮತ್ತು ನನಗೆ ಫೋನ್ ಮುಖೇನಾ ತಿಳಿಸಿದ್ದರು.ನಾವು ತಕ್ಷಣವೇ ಮನೆಗೆ ಹೋಗಿ ಅವರನ್ನು ಅಟೋ ರಿಕ್ಷಾ ಒಂದರಲ್ಲಿ ಆದರ್ಶ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಸರಕಾರಿ ಅಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು.ಪುತ್ತೂರು ಸರಕಾರಿ ಅಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ರಾತ್ರಿ ಸಮಯ 11-15 ಗಂಟೆಗೆ ತಂದೆ ಧರ್ಮ ಅವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ’ ಎಂದು ಮೃತರ ಪುತ್ರ ರವಿ ಎಂ.ಎಂಬವರು ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here