ಪುತ್ತೂರು: ಪುತ್ತೂರು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ಅಸಿಸ್ಟೆಂಟ್ ಸೂಪರ್ವೈಸರ್ ಪದ್ಮಶೇಖರರವರು ಅ.31ರಂದು ಕರ್ತವ್ಯದಿಂದ ನಿವೃತ್ತಿಗೊಳ್ಳಲಿದ್ದಾರೆ.
1991ರ ಎಪ್ರಿಲ್ 26ರಂದು ಆಪರೇಟರ್-2 ಆಗಿ ಕರ್ತವ್ಯಕ್ಕೆ ಸೇರಿದ ಇವರು ಬಳಿಕ ಆಪರೇಟರ್, ಸೀನಿಯರ್ ಆಪರೇಟರ್ ಆಗಿ ಬಳಿಕ ಅಸಿಸ್ಟೆಂಟ್ ಸೂಪರ್ ವೈಸರ್ ಆಗಿ ಭಡ್ತಿ ಪಡೆದಿದ್ದರು. ಒಟ್ಟು ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿದ್ದಾರೆ. ಸುಳ್ಯ ತಾಲೂಕು ಕೇರ್ಪಳ ನಿವಾಸಿಯಾದ ಇವರು ಪತ್ನಿ ಗೀತಾಂಜಲಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಉದ್ಯೋಗದಲ್ಲಿರುವ ಪುತ್ರ ನಿಶ್ಚಿತ್ದಾಸ, ಪುತ್ರಿ ರಚಿತ ಪಿ.ರವರೊಂದಿಗೆ ರೋಟರಿಪುರದಲ್ಲಿ ಪದ್ಮಗೀತ ನಿಲಯದಲ್ಲಿ ವಾಸವಾಗಿದ್ದಾರೆ.
