ಪುತ್ತೂರು:ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಿ ಸ್ಕೂಟಿ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಮನ್ಸೂರ್(38ವ.)ಬೆಟ್ಟಂಪಾಡಿ ಬಂಧಿತ ಆರೋಪಿ. ಅಪಘಾತದ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್(ಕೆ.22-ಸಿ.1382)ಗೆ ಮಧ್ಯಾಹ್ನ 1.30ರ ಸಮಯ, ಬಿಸಿರೋಡ್ ಎಸ್.ಜಿ.ಸರ್ಕಲ್‌ನಿಂದ ಆ್ಯಂಬುಲೆನ್ಸ್ ಮುಂದಿನಿಂದ ಹೋಗುತ್ತಿದ್ದ ಸ್ಕೂಟಿ (ಕೆ.ಎ.19:ಇಕೆ 0696)ಸವಾರ ಆ್ಯಂಬುಲೆನ್ಸ್ ನ ಸೈರನ್ ಶಬ್ದ ಕೇಳಿಯೂ ಆ್ಯಂಬ್ಯುಲೆನ್ಸ್ ಗೆ ದಾರಿ ಬಿಟ್ಟು ಕೊಡದೆ ಆ್ಯಂಬುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಅದಾದ ಬಳಿಕದ ಬೆಳವಣಿಗೆಯಲ್ಲಿ ಈ ಘಟನೆ ಕುರಿತು ಕಲಂ 110, 125 ಬಿ.ಎನ್.ಎಸ್‌ನಂತೆ ಪ್ರಕರಣ(ಅ. ಕ್ರ.128/2025)ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ಆರೋಪಿ ಮಹಮ್ಮದ್ ಮನ್ಸೂರ್‌ನನ್ನು ಬಂಧಿಸಿದ್ದಾರೆ.
