ಪುತ್ತೂರು ಪೊಲೀಸ್ ಉಪವಿಭಾಗದಿಂದ ರಾಷ್ಟ್ರೀಯ ಏಕಾತ ದಿನ – ಐಕ್ಯತೆಗಾಗಿ ಓಟ

0

ಪುತ್ತೂರು: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿವಸ್ ಆಚರಣೆ ನಡೆಯುತ್ತಿದ್ದು ಪುತ್ತೂರು ಉಪವಿಭಾಗ ಪೊಲೀಸ್ ವತಿಯಿಂದ ಸಂತ ಪಿಲೋಮಿನಾ ಕಾಲೇಜೀನ ಸಹಯೋಗದೊಂದಿಗೆ ಐಕ್ಯತಾ ಓಟ ಅ.31 ರಂದು ದರ್ಬೆ ಕಾಲೇಜು ಕ್ಯಾಂಪಸ್ ನಿಂದ ಏಳ್ಮುಡಿ ತನಕ ನಡೆಯಿತು.


ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೋಮಾರೆಡ್ಡಿ, ಡಿವೈಎಸ್ಪಿ ಅರುಣ್‌ನಾಗೇಗೌಡ, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ, ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ , ಸಂತ ಪಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡ ಆ್ಯಂಟನಿ ಪ್ರಕಾಶ್ ಮೊಂತೆರೊ, ಕಾಲೇಜಿನ ಉಪನ್ಯಾಸಕರು , ಸಹಿತ ನಗರ, ಸಂಚಾರ, ಗ್ರಾಮಾಂತರ ಪೊಲೀಸ್ ಠಾಣೆ ಎಸ್ ಐ ಗಳು ಹಾಗು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ರೋವರ್ ರೇಂಜರ್, ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಏಕತಾ ಓಟದಲ್ಲಿ ಭಾಗವಹಿಸಿದರು. ಕಾಲೇಜು‌ ಕ್ಯಾಂಪಸ್ ನಿಂದ ಹೊರಟ ಓಟ ಕಲ್ಲಾರೆ ಬಳಿಯಿಂದ ಹಿಂದಿರುಗಿ ಕ್ಯಾಂಪಸ್ ನಲ್ಲಿ ಸಮಾರೋಪಗೊಂಡಿತು.


LEAVE A REPLY

Please enter your comment!
Please enter your name here