ಬಲ್ನಾಡು ಉಜ್ರುಪಾದೆ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ

0

ಪುತ್ತೂರು: ಬಲ್ನಾಡು ಉಜ್ರುಪಾದೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.30 ರಂದು 2025-26 ರ ಮೊದಲ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ಪೂಜಾರಿ ನಾಗಗದ್ದೆ, ಉಪಾಧ್ಯಕ್ಷೆ ಯಶೋಧ ಕಟ್ಟೆಮನೆ, ಮಾರ್ಗದರ್ಶಿ ಶಿಕ್ಷಕರಾದ ಗ್ರೆಗೊರಿ ರೋನಿ ಪಾಯಸ್, ಕಟ್ಟೆ ಫ್ರೆಂಡ್ಸ್ ಬಲ್ನಾಡು ಇದರ ಅಧ್ಯಕ್ಷ ಪ್ರವೀಣ ಕುಮಾರ್ ಓಟೆ, ಬಾಲ ಗೋಕುಲ ತರಬೇತಿ ನೀಡಿದ ಅದ್ವಿತಿ, ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ ಒ ಉಪಸ್ಥಿತರಿದ್ದರು.

ಶಾಲೆಗೆ ಹೊಸಮಾರ್ಗ ನಿರ್ಮಿಸಿಕೊಟ್ಟ ಕಟ್ಟೆ ಫ್ರೆಂಡ್ಸ್ ಬಲ್ನಾಡುವಿನ ಅಧ್ಯಕ್ಷ ಪ್ರವೀಣ ಕುಮಾರ್ ಓಟೆ ಮತ್ತು ಬಾಲಗೋಕುಲ ತರಬೇತಿ ನೀಡಿದ ಅದಿತಿ ಇವರನ್ನು ಶಾಲೆ ಮತ್ತು SDMC ವತಿಯಿಂದ ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರೆಗೊರಿ ರೋನಿ ಪಾಯಸ್ ಇವರು ಸಮುದಾಯದತ್ತ ಕಾರ್ಯಕ್ರಮದ ಮಾರ್ಗದರ್ಶನ ಮಾಡಿದರು.

ಮುಖ್ಯೋಪಾಧ್ಯಾಯಿನಿ ಭವಾನಿ ಒ ಇವರು ಮಕ್ಕಳಿಗೆ ಮತ್ತು ಪೋಷಕರಿಗೆ ಶೈಕ್ಷಣಿಕ ಮಾಹಿತಿ ನೀಡಿದರು. SDMC ಅಧ್ಯಕ್ಷರಾದ ರಾಧಾಕೃಷ್ಣ ಪೂಜಾರಿ ಇವರು ಮಕ್ಕಳಿಗೆ ಬುದ್ಧಿ ಮಾತು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಪೋಷಕರು ಹಾಜರಿದ್ದರು. ಶಾಲಾ ಶಿಕ್ಷಕಿಯರಾದ ಚಿತ್ರಲೇಖ ಕಾರ್ಯಕ್ರಮ ನಿರೂಪಿಸಿ, ಪವಿತ್ರ ಸ್ವಾಗತಿಸಿ, ನಮಿತಾ ವಂದಿಸಿದರು. ಉಳಿದ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here