
ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ದರ್ಬೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆಯು ಎನ್ ಎಸ್ ಕಿಲ್ಲೆ ಮೈದಾನದ ತನಕ ನಡೆಯಿತು. ಕಿಲ್ಲೆ ಮೈದಾನದಲ್ಲಿ ಮಂಗಲ್ ಪಾಂಡೆ ಚೌಕಿಯಲ್ಲಿ ತಹಸೀಲ್ದಾರ್ ನಾಗರಾಜ್ ರಾಷ್ಟ್ರಧ್ವಜರೋಹಣ ಮಾಡಿದರು. ಕಿಲ್ಲೆ ಮೈದಾನದ ಪುರಭವನದ ಎದುರು ಶಾಸಕ ಅಶೋಕ್ ಕುಮಾರ್ ರೈ ಅವರು ಕನ್ನಡದ ಧ್ವಜಾರೋಹಣ ಮಾಡಿದರು.
ಸಮಾರಂಭದಲ್ಲಿ 12 ಮಂದಿಗೆ ಮತ್ತು ಒಂದು ಸಂಸ್ಥೆಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ತಹಸೀಲ್ದಾರ್ ನಾಗರಾಜ್ ಎನ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ನಗರಸಭೆ ಪೌರಾಯುಕ್ತೆ ವಿದ್ಯಾ ಎಮ್ ಕಾಳೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ:
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಜೆ ಸಿ ಅಡಿಗ, ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಝೇವಿಯರ್ ಡಿ ಸೋಜಾ, ಸಾಹಿತ್ಯ ಪರಿಸರ ಕ್ಷೇತ್ರ ಡಾ. ರಾಜೇಶ್ ಬೆಜ್ಜಂಗಳ, ಪತ್ರಿಕೋದ್ಯಮದಲ್ಲಿ ಉದಯ ಕುಮಾರ್ ಯು ಎಲ್, ಶಿಲ್ಪಕಲಾ ಕ್ಷೇತ್ರದಲ್ಲಿ ಶಿಲ್ಪಿ ಎಂ. ವಾಸುದೇವ ಆಚಾರ್ಯ , ಸಮಾಜ ಕ್ಷೇತ್ರದಲ್ಲಿ ಅಬೂಬಕ್ಕರ್ ಮುಲಾರ್, ಶಿಕ್ಷಣ ಕ್ಷೇತ್ರದಲ್ಲಿ ರಮೇಶ್ ಉಳಯ, ವೈದ್ಯಕೀಯದಲ್ಲಿ ಸಮಾಜ ಸೇವೆಯಲ್ಲಿ ಸಂಶುದ್ದೀನ್ ಸಾಲ್ಮರ, ದೈವಾರಾಧನೆ ಕ್ಷೇತ್ರದಲ್ಲಿ ಬಾಲಕೃಷ್ಣ ಪೂಜಾರಿ ಪಲ್ಲತ್ತಾರು, ಯಕ್ಷಗಾನ ಕ್ಷೇತ್ರದಲ್ಲಿ ವಿನೋದ್ ರೈ, ರಂಗಭೂಮಿಯಲ್ಲಿ ಪವಿತ್ರಾ ಹೆಗ್ಡೆ, ಸಂಘಟನೆಯ ಮೂಲಕ ಗಡಿನಾಡಿನ ಸಾಧಕ ಡಾ.ಅಬೂಬಕರ್ ಹಾಜಿ ಆರ್ಲಪದವು, ಸಂಘ ಸಂಸ್ಥೆ ವಿಭಾಗದಲ್ಲಿ ಜೆಸಿಐ ಸಂಸ್ಥೆಯ ಅಧ್ಯಕ್ಷ ಭಾಗ್ಯೇಶ್ ರೈ ಅವರನ್ನು ತಾಲೂಕು ಕನ್ನಡ ರಾಜ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.