ತುಳಸಿಯಡ್ಕ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಸೇವಾ ನಿವೃತ್ತಿ

0

ಬಡಗನ್ನೂರು : ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯ ತುಳಸಿಯಡ್ಕ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ತಮ್ಮ 35 ವರ್ಷ ಸುದೀಘ ಸೇವೆ ಸಲ್ಲಿಸಿ ಅ. 31 ರಂದು ಸೇವಾ ನಿವೃತ್ತಿ ಹೊಂದಿದರು.

 ಇವರು ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ 1 ಅಂಗನವಾಡಿ ಕೇಂದ್ರದಲ್ಲಿ 1991 ರಲ್ಲಿ ಸೇವೆಯನ್ನು ಪ್ರಾರಂಭಿಸಿದರು.ತದನಂತರ 2003 ರಲ್ಲಿ ವರ್ಗಾವಣೆಗೊಂಡು ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತುಳಸಿಯಡ್ಕ ಅಂಗನವಾಡಿ ಕೇಂದ್ರದ ಸೇವೆ ಸೇರಿ ಸುದೀಘ 35 ವರ್ಷ ಸೇವೆ ಸಲ್ಲಿಸಿ ಅ. 31 ರಂದು ಸೇವಾ ನಿವೃತಿ ಹೊಂದಿದರು. ನಿವೃತ್ತಿ ಹೊಂದಿರುವ ಜಯಲಕ್ಷ್ಮಿ ರವರು ಪತಿ ಆನಂದ ನಾಯ್ಕ ಓರ್ವ ಪುತ್ರ ಮಧುಸೂದನ್ ರವರೊಂದಿಗೆ ಅರಿಯಡ್ಕ ಗ್ರಾ. ಪಂ ವ್ಯಾಪ್ತಿಯ ಮಾಡ್ನೂರು ಗ್ರಾಮದ ಮುಂಡಕೊಚ್ಚಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ

LEAVE A REPLY

Please enter your comment!
Please enter your name here