ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಕುವೆತ್ತಿಮಾರು ನಿವಾಸಿ, ಬಿಜೆಪಿ ಹಿರಿಯ ಮುಖಂಡ, ಕೃಷಿಕ ಅಣ್ಣು ಗೌಡ (79ವ.)ರವರು ವಯೋಸಹಜ ಅನಾರೋಗ್ಯದಿಂದ ನ.1ರಂದು ಬೆಳಿಗ್ಗೆ ನಿಧನರಾದರು.
ಅಣ್ಣು ಗೌಡ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಗುರುತಿಸಿಕೊಂಡಿಧ್ಧರು. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅತೀ ಹೆಚ್ಚಿನ ಆರ್ಥಿಕ ಹಾಗೂ ಇನ್ನಿತರ ನೆರವು ನೀಡುತ್ತಿದ್ದರು.
ಮೃತರು ಪತ್ನಿ ಕಲ್ಯಾಣಿ, ಪುತ್ರರಾದ ಸತೀಶ್, ಜನಾರ್ದನ, ಪುತ್ರಿಯರಾದ ಬಾಲಕಿ, ಪುಷ್ಪಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
