ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ

0

ಆಲಂಕಾರು: ಶ್ರೀ ಭಾರತಿ ವಿದ್ಯಾಸಂಸ್ಥೆಗಳು ಆಲಂಕಾರು,ಗ್ರಾಮವಿಕಾಸ ಸಮಿತಿ ಆಲಂಕಾರು,ಸಪ್ತ ಶಕ್ತಿ ಸಂಗಮ ಆಲಂಕಾರು,ಲಯನ್ಸ್ ಕ್ಲಬ್ ದುರ್ಗಂಬಾ ಆಲಂಕಾರು,ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್,ಪುತ್ತೂರು ಇವುಗಳ ಸಹಯೋಗದಲ್ಲಿ ಆಲಂಕಾರು ಭಾರತಿ ವಿದ್ಯಾಸಂಸ್ಥೆ ಯ ಮಾಧವ ಸಭಾಭವನ ದಲ್ಲಿ ರಕ್ತ ದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಈಶ್ವರ ಗೌಡ ಪಜ್ಜಡ್ಕ ವಹಿಸಿದ್ದರು.ಲ/ಪದ್ಮಪ್ಪ ಗೌಡ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟನೆಗೈದರು.ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಮಾತಾನಾಡಿದ ರೋಟರಿ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ.ರಾಧಾಕೃಷ್ಣ ರಾವ್, ರಕ್ತ ದಾನದ ಮಹತ್ವ ಮತ್ತು ಪ್ರಯೋಜನ ಸೇರಿದಂತೆ,ಹಲವು ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಂಡರು.

ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಲ /ಇಂದುಶೇಖರ ಶೆಟ್ಟಿ, ಲಯನ್ಸ್ ಕ್ಲಬ್ ದುರ್ಗಂಬಾ ಇದರ ಕಾರ್ಯದರ್ಶಿ ಲ/ಲಿಂಗಪ್ಪ ಪೂಜಾರಿ ನೈಯಲ್ಗ ಉಪಸ್ಥಿತರಿದ್ದರು.ಶಾಲಾ ಆಡಳಿತ ಮಂಡಳಿ ಸದಸ್ಯೆ ಮಮತಾ ಅಂಬರ್ಜೆ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿದರು.ಮುಖ್ಯಮಾತಾಜಿ ಆಶಾ ಎಸ್.ರೈ ವಂದಿಸಿದರು.ವಿದ್ಯಾರ್ಥಿನಿಯರಾದ ರಕ್ಷಿತಾ,ಅಮೃತಾ,ದ್ವಿತಿ,ದ್ಯುತಿ ಎಚ್.ಕೆ,ರಶ್ಮಿಕಾ ಪ್ರಾರ್ಥಿಸಿದರು.ಶಿಕ್ಷಕ ಚಂದ್ರಹಾಸ್ ಕೆ.ಸಿ ಕುಂಟ್ಯಾನ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆ ಎಲ್ಲಾ ಶಿಕ್ಷಕ ವೃಂದ ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here