ಪುತ್ತೂರು : ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕ ಗಳನ್ನು ಓದುವ ಹವ್ಯಾಸ ಬೆಳೆಸಿ ಕೊಂಡರೆ ಮಾತ್ರ ಕನ್ನಡ ಭಾಷೆ ಬೆಳೆಯಬಹುದು ಎಂದು ಸರಸ್ವತಿ ವಿದ್ಯಾ ಮಂದಿರದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ತೀರ್ಥರಾಮ ನುಡಿದರು. ಕರ್ನಾಟಕ ರಾಜ್ಯೋತ್ಸವದ ಕನ್ನಡ ಧ್ವಜಾರೋಹಣ ನಿರ್ವಹಿಸಿದ ಅವರು ಕನ್ನಡ ಭಾಷೆಯ ಮಹತ್ವ ವಿವರಿಸಿದರು.
ಭಾರತಿ ಕೊಲ್ಲರಮಜಲು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಧ್ಯಕ್ಷರಾದ ಅವಿನಾಶ್ ಕೊಡಂಕಿರಿ,ಮುಖ್ಯ ಅತಿಥಿಗಳಾಗಿ ಸುರೇಶ್ ಭಟ್ ಸೂರ್ಡೇಲು, ವಿಶ್ವನಾಥ ಬಲ್ಯಾಯ, ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ಮುಖ್ಯ ಶಿಕ್ಷಕರಾದ ಅಖಿಲಾ ಕೆ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಕನ್ನಡ ಭಾಷಣ, ಕವಿಗೋಷ್ಠಿ, ನೃತ್ಯ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳಾದ ಧನ್ವಿ ಮತ್ತು ಶಾನ್ವಿ ಪ್ರಾರ್ಥನೆ ಗೈದರು. 9ನೇ ತರಗತಿಯ ಧನುಷಾ ಟಿ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. 10ನೇ ತರಗತಿಯ ಮಿಥಾಲಿ ಇವರು ವಂದಿಸಿದರು.
