ಪುತ್ತೂರಿನಲ್ಲಿ ಬ್ರಿಟೀಷರ ಕಾಲದ ಸೈರನ್‌ಗೆ ಜೀವ ಕಳೆ !

0

ಪುತ್ತೂರು: ಯಾರ ಕೈಯಲ್ಲೂ ವಾಚ್ ಇಲ್ಲ, ಯಾವ ಮನೆಯಲ್ಲೂ ಗಡಿಯಾರಗಳು ಟಿಕ್ ಟಿಕ್ ಸದ್ದು ಮಾಡದೇ ಇದ್ದ ಕಾಲದಲ್ಲಿ ಪುತ್ತೂರಿನ ಜನತೆಗೆ ನಿರ್ದಿಷ್ಟ ಸಮಯ ನೆನಪಿಸುತ್ತಿದ್ದದ್ದು ಪುತ್ತೂರು ಕಿಲ್ಲೆ ಮೈದಾನದಲ್ಲಿರುವ ಸೈರನ್ ಹೌಸ್. ಕಾಲ ಕ್ರಮೇಣ ಸದ್ದು ಮಾಡದಿರವ ಸೈರನ್ ಇದೀಗ ಮತ್ತೆ ಮೊಳಗಳಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.


ದಿನಕ್ಕೆ ಮೂರು ಬಾರಿ ಸೈರನ್ ಮಾಡಿ ಜನರಿಗೆ ವೇಳೆ ತಿಳಿಸುತ್ತಿತ್ತು. ವಾಚ್, ಗಡಿಯಾರಗಳು ಮರೀಚಿಕೆಯಾಗಿದ್ದ ಬ್ರಿಟಿಷ್ ಕಾಲದಲ್ಲಿ ಜನತೆಗೆ ಸರಿಯಾಗಿ ಸಮಯದ ಪಾಲನೆ ಮಾಡಲಿ ಎನ್ನುವ ಕಾರಣಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ಬ್ರಿಟಿಷರು ಒಂದು ಸೈರನ್ ಹೌಸ್ ಕಟ್ಟಿದ್ದರು. ಪುತ್ತೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಈ ಸೈರನ್ ಹೌಸ್ ಕಾಲಕ್ರಮೇಣ ಕೆಟ್ಟು ಹೋಗಿ ಕೇವಲ ಸ್ಮಾರಕವಾಗಿ ಬದಲಾಗಿದೆ. ಸಮಯದ ಪ್ರಜ್ಞೆಯೇ ಇಲ್ಲದ ಆ ದಿನಗಳಲ್ಲಿ ಸೂರ್ಯನ ಗತಿಯನ್ನು ಲೆಕ್ಕಹಾಕಿ ಸಮಯವನ್ನು ತಿಳಿದುಕೊಳ್ಳಲಾಗುತ್ತಿತ್ತು. ಬ್ರಿಟಿಷರು ಬಂದ ಬಳಿಕ ಅವರ ಆಡಳಿತ ವ್ಯವಸ್ಥೆಗೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಅಲ್ಲಲ್ಲಿ ಇಂತಹ ಸೈರನ್ ಹೌಸ್ ಗಳನ್ನು ಸ್ಥಾಪಿಸಿದ್ದರು. ಆದರೆ ಇದೀಗ ನಿಂತು ಹೋದ ಸೈರನ್‌ಗೆ ಶಾಸಕರು ಜೀವ ಕಳೆ ತುಂಬುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈಗ ಇರುವ ಮಿನಿ ವಿಧಾನ ಸೌಧದ ಹಿಂದುಗಡೆ ಕಟ್ಟಡದಲ್ಲಿ ನ್ಯಾಯಾಲಯ ಸಂಕೀರ್ಣ ಆರಂಭವಾದಾಗ ಸೈರನ್‌ಗೆ ಬ್ರೇಕ್ ಬಿದ್ದಿತ್ತು ಎಂದು ಹಿರಿಯರು ಮಾಹಿತಿ ನೀಡಿದ್ದಾರೆ. ಸೈರನ್ ಮೊಳಗಿದರೆ ಅದು ಕೋರ್ಟು ಕಲಾಪಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಬಂದ್ ಮಾಡಲಾಗಿತ್ತು. ಈಗ ಅಲ್ಲಿ ನ್ಯಾಯಾಲಯ ಸಂಕೀರ್ಣ ಇಲ್ಲ. ಪಕ್ಕದಲ್ಲೇ ಕೋರ್ಟು ಇದ್ದರೂ ಅದು ಇನ್ನು ಬನ್ನೂರಿನ ಆನೆಮಜಲಿನಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಇನ್ನು ಮುಂದೆ ಸೈರನ್ ಮೊಳಗಿದರೆ ನ್ಯಾಯಾಲಯ ಕಲಾಪಕ್ಕೆ ಅಡ್ಡಿಯಾಗುವ ಆತಂಕವಿಲ್ಲದೇ ಇರುವ ಕಾರಣ ಪುತ್ತೂರು ನಗರದ ಮಧ್ಯಭಾಗದಲ್ಲಿ ಸೈರನ್ ಮೊಳಗಲಿದೆ.

1971ರಲ್ಲಿ ದೊಡ್ಡ ಸೈರನ್ ಸಿಸ್ಟಮ್ ಇತ್ತು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಸೈರನ್ ಮೊಳಗಿಸುವ ಕೆಲಸ ಆಗುತ್ತಿತ್ತು. ಈಗ ಮತ್ತೆ ಅದಕ್ಕೆ ಮರು ಜೀವ ಕೊಡುವ ಕೆಲಸ ಆಗಬೇಕಾಗಿದೆ. ಹಿಂದಿನ ವ್ಯವಸ್ಥೆಯನ್ನು ತೋರಿಸುವ ಮೂಲಕ ಆನಂದ ಪಡಬೇಕು. ನಗರಸಭೆ ಅಧಿಕಾರಿಗಳು ಬಂದು ಅದರ ತಪಾಸಣೆ ಮಾಡುತ್ತಾರೆ. ಅದಕ್ಕೆ ಸುಣ್ಣ ಬಣ್ಣ ಬಳಿದು ಸಾರ್ವಜನಿಕರಿಗೆ ಪ್ರಯೋಜನ ಆಗುವುದಾದರೆ ಹಿಂದಿನ ಆಚಾರ ವಿಚಾರವನ್ನು ಮರು ಆರಂಭ ಮಾಡುವುದಕ್ಕೆ ಚಿಂತನೆ ಮಾಡುತ್ತೇವೆ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here