ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸುಳ್ಯದ ಡಾ.ರೇಣುಕಾ ಪ್ರಸಾದ್ ಕುರುಂಜಿ ಮತ್ತು ಮನೆಯವರಿಂದ ಅರ್ಪಣೆಯಾಗಲಿರುವ ‘ಬೆಳ್ಳಿ ರಥ’ ಯಾತ್ರೆಗೆ ಕುಂಬ್ರದಲ್ಲಿ ನ.4ರಂದು ಭವ್ಯ ಸ್ವಾಗತ ನೀಡಲಾಯಿತು. ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಬೆಳ್ಳಿ ರಥವನ್ನು ಕೋಟೇಶ್ವರಿಂದ ಸುಳ್ಯಕ್ಕೆ ರಥಯಾತ್ರೆಯ ಮೂಲಕ ಕೊಂಡೊಯ್ಯಲಾಗುತ್ತಿದ್ದು ನ.10ರಂದು ರಥದ ಸಮರ್ಪಣೆ ನಡೆಯಲಿದೆ.
ರಥ ಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಟೇಶ್ವರದ ಬಿ.ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ರಾಜಗೋಪಾಲ ಆಚಾರ್ಯರವರು ಬೆಳ್ಳಿ ರಥವನ್ನು ನಿರ್ಮಿಸಿದ್ದಾರೆ. ಕುಂಬ್ರದಲ್ಲಿ ರಥಕ್ಕೆ ಆರತಿ ಬೆಳಗಿ, ಹಾರಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು ಬಳಿಕ ತೆಂಗಿನ ಕಾಯಿ ಒಡೆಯುವ ಮೂಲಕ ರಥಕ್ಕೆ ಕುಂಬ್ರದಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಪರ್ಪುಂಜ ರಾಮಜಾಲು ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಕೆವಿಜಿ ತಾಂತ್ರಿಕ ಪ್ರಾಯೋಗಾಲಯದ ಮೇಲ್ವಿಚಾರಕರಾದ ಜಯರಾಮ ಬೊಳ್ಳಾಡಿ, ಕಟ್ಟಡ ಕಾರ್ಮಿಕರ ಕುಂಬ್ರ ವಲಯ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಪರ್ಪುಂಜ ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ, ಗ್ರಾಪಂ ಮಾಜಿ ಸದಸ್ಯೆ ಉಷಾ ನಾರಾಯಣ್, ಕುಂಬ್ರ ಅಂಗನವಾಡಿ ಶಿಕ್ಷಕಿ ಆಶಾಲತಾ ರೈ, ರಾಜೀವಿ ಕುಂಬ್ರ, ರೇಖಾ ರೈ, ರೋಹಿಣಿ ಪರ್ಪುಂಜ, ಮೀನಾಕ್ಷಿ ಪರ್ಪುಂಜ, ಶ್ರೀಮತಿ ಸುರೇಶ್, ಭವ್ಯ ರಾಜೇಶ್, ಭವ್ಯ ಪುನೀತ್, ರಾಧಾಕೃಷ್ಣ ಗೌಡ ಪರ್ಪುಂಜ, ಹೇಮಲತಾ, ರೇವತಿ, ವೀಣಾ ರೈ, ಜಯಂತಿ, ಸುಶೀಲಾ ಕುಂಬ್ರ, ಕರುಣಾ ರೈ ಬಿಜಳ, ರಾಜ್‌ಪ್ರಕಾಶ್ ರೈ ಕೊಡೆಂಚಾರ್, ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ನಾಗೇಶ್ ರೈ ಪರ್ಪುಂಜ, ಸುರೇಶ್ ನಾಯ್ಕ್ ಪರ್ಪುಂಜ, ಹರೀಶ್ ರೈ ಮುಗೇರು, ನಾರಾಯಣ ಪೂಜಾರಿ ಕುರಿಕ್ಕಾರ, ಗ್ರಾಮ ಸಹಾಯಕ ಶ್ರೀಧರ್, ಶ್ರೀನಿವಾಸ ರೈ ಕುಂಬ್ರ, ಜೀವ ವಿಮೆ ಸಲಹೆಗಾರ ನಾರಾಯಣ ಕುಕ್ಕುಪುಣಿ, ಶಿವರಾಮ ಗೌಡ ಬೊಳ್ಳಾಡಿ, ಯುವರಾಜ್ ಪೂಂಜಾ, ಪ್ರದೀಪ್ ಶಾಂತಿವನ, ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಸೇರಿದಂತೆ ವರ್ತಕರ ಸಂಘದ ಪದಾಧಿಕಾರಿಗಳು, ರಿಕ್ಷಾ ಚಾಲಕ ಮಾಲಕರು, ಕುಂಬ್ರ ಸ್ಪಂದನಾ ಸೇವಾ ಬಳಗ, ಪರ್ಪುಂಜ ಸ್ನೇಹ ಮಹಿಳಾ ಮಂಡಲ, ಸ್ನೇಹ ಯುವಕ ಮಂಡಲದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಡಾ.ರೇಣುಕಾಪ್ರಸಾದ್ ಕೆ.ವಿ ಕುರುಂಜಿಯವರು ಭಕ್ತಾಧಿಗಳಿಗೆ ಶಾಲು ಹಾಕಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.