ಪುತ್ತೂರು: ಪುತ್ತೂರು ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ಸಂಘಟನೆಯ ಹಿರಿಯ ಸದಸ್ಯರಾದ ಇಬ್ರಾಹಿಂ ಕುಂಬ್ರ ಅವರು ಕೆಲವು ತಿಂಗಳ ಹಿಂದೆ ಮಂಗಳೂರಿನ ಫಾದರ್ ಮುಲ್ಲರ್ ಇಲ್ಲಿ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೊಳಪಟ್ಟು ಪ್ರಸ್ತುತ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು, ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರ ಮಾರ್ಗದರ್ಶನದಂತೆ ಸಂಘದ ಪದಾಧಿಕಾರಿಗಳ ತಂಡವು ಮನೆಗೆ ಭೇಟಿ ನೀಡಿ ಕ್ಷೇಮ ಸಮಾಚಾರ ವಿಚಾರಿಸಿ, ಸಂಘದ ಪರಿಹಾರ ನಿಧಿಯಿಂದ ಧನಸಹಾಯ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ತಾರಾನಾಥಗೌಡ ಬನ್ನೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಸಂಚಾಲಕ ಇಸ್ಮಾಯಿಲ್ ಬೊಲ್ವಾರ್ ಹಾಗೂ ಅರವಿಂದ್ ಪೆರಿಗೇರಿ, ಕೋಶಾಧಿಕಾರಿ ಸಿಲ್ವೇಸ್ಟರ್ ಡಿ ಸೋಜ, ಉಪಾಧ್ಯಕ್ಷ ಶಶಿಧರ್ ಸಿಟಿಗುಡ್ಡೆ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಬನ್ನೂರ್ ಹಾಗೂ ಸದಸ್ಯ ರಾಧಾಕೃಷ್ಣ ಉಪಸ್ಥಿತರಿದ್ದರು.
