ವೈವಾಹಿಕ ಜೀವನದ ಬೆಳ್ಳಿಹಬ್ಬ ಆಚರಿಸಿರುವ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ದಂಪತಿಗೆ ಅಭಿನಂದನೆ

0

ಪುತ್ತೂರು: ನ.5 ರಂದು ವೈವಾಹಿಕ ಜೀವನದ ಬೆಳ್ಳಿಹಬ್ಬ ಆಚರಿಸಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಜಯಂತ್ ನಡುಬೈಲು ಹಾಗೂ ಶ್ರೀಮತಿ ಕಲಾವತಿ ಜಯಂತ್ ದಂಪತಿಗೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಜಯಂತ್ ನಡುಬೈಲು ದಂಪತಿಯ ಭಾವಚಿತ್ರವಿರುವ ಸ್ಮರಣಿಕೆ ಹಾಗೂ ಹೂಗುಚ್ಛ ನೀಡಿ  ಅಭಿನಂದಿಸಲಾಯಿತು.

ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಜಯಂತ್ ನಡುಬೈಲು ದಂಪತಿಯನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಕಾರ್ಯದರ್ಶಿ ನವೀನ್ ರೈ ಪಂಜಳ, ಕೋಶಾಧಿಕಾರಿ ಜಯಂತ್ ಬಾಯಾರು, ಪೂರ್ವಾಧ್ಯಕ್ಷರಾದ ಪುರಂದರ ರೈ ಮಿತ್ರಂಪಾಡಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ, ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಜಯಂತ್ ಕೆಂಗುಡೇಲು, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈ,ಸದಸ್ಯ ನಿಶಾಂತ್ ರೈ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಬೊಳ್ವಾರು ವಿನಾಯಕ ಟ್ರೇಡರ್ಸ್ ಮಾಲಕ ನವೀನ್ ಶೆಟ್ಟಿ ಹಾಗೂ ಜಯಂತ್ ನಡುಬೈಲು ರವರ ಪುತ್ರರಾದ ಡಾ.ಅಕ್ಷಯ್ ನಡುಬೈಲು, ಅಂಚಿತ್ ನಡುಬೈಲುರವರು ಉಪಸ್ಥಿತರಿದ್ದರು.

ಸಮಾಜ ಸೇವಕ ಜಯಂತ್ ನಡುಬೈಲುರವರು..|
ದಾಂಪತ್ಯ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಆತ್ಮೀಯರಾದ ಜಯಂತ್ ನಡುಬೈಲು ದಂಪತಿರವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದವರಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದವರು. ಇದೀಗ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲೆಂದು ವೃತ್ತಿಪೂರಕ ಶಿಕ್ಷಣವನ್ನು ಆರಂಭಿಸಿ ಅದರಲ್ಲಿ ಯಶಸ್ಸನ್ನು ಗಳಿಸಿರುತ್ತಾರೆ. ಮೃದು ಹಾಗೂ ಸರಳತೆಯ ವ್ಯಕ್ತಿತ್ವದ ಸಮಾಜ ಸೇವಕ ಜಯಂತ್ ನಡುಬೈಲು ದಂಪತಿಗಳ ಮುಂದಿನ ಜೀವನವು ಆಯುರಾರೋಗ್ಯದಿಂದ, ಸುಖ, ನೆಮ್ಮದಿ, ಶಾಂತಿಯಿಂದ ಕೂಡಿರಲಿ ಎಂಬುದೇ ನಮ್ಮ ಹಾರೈಕೆ.
-ಶಶಿಧರ್ ಕಿನ್ನಿಮಜಲು,
ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಈಸ್ಟ್

LEAVE A REPLY

Please enter your comment!
Please enter your name here