ಪುತ್ತೂರು : ಸವಣೂರು ಗ್ರಾಮದ ಕಣಿಮಜಲು ಬೀಡಿನ ಜೀರ್ಣೋದ್ಧಾರದ ಕಾರ್ಯದ ಪ್ರಯುಕ್ತ ಅ. 30 ಮತ್ತು ಅ. 31 ರಂದು ತಂತ್ರಿಗಳಾದ ಪದ್ಮನಾಭ ಉಚ್ಚಿಲತ್ತಾಯರ ನೇತೃತ್ವದಲ್ಲಿ ಅನುಜ್ಞಾ ಕಲಶ ಜರಗಿತು.
ಅ.30 ರಂದು ರಾತ್ರಿ ಸುದರ್ಶನ ಹೋಮ, ವನದುರ್ಗಾ ಹೋಮ,ದುರ್ಗಾ ಪೂಜೆ, ಸುಹಾಸಿನಿ ಆರಾಧನೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಮುಖಾಂತರ ಪ್ರೇತಗಳ ಉಚ್ಚಾಟನೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಅ. 31 ರಂದು ಬೆಳಿಗ್ಗೆ ಗಣಪತಿ ಹೋಮ, ಅನುಜ್ಞಾ ಕಲಶ, ವರಾಹ ಪೂಜೆ, ಪ್ರಸಾದ ವಿತರಣೆ ನಡೆಯಿತು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ಕಣಿಮಜಲು ಬೀಡು ಆಡಳಿತದಾರ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಸವಣೂರುಗುತ್ತು ಕುಟುಂಬಸ್ಥರು ಹಾಗೂ ಊರವರು ಉಪಸ್ಥಿತರಿದ್ದರು.