4 ವರ್ಷಗಳ ಹಿಂದೆ ಲಾರಿ-ರಿಕ್ಷಾ ಅಪಘಾತ : ಆರೋಪಿ ಲಾರಿ ಚಾಲಕನಿಗೆ ಜೈಲು ಶಿಕ್ಷೆ

0

ಪುತ್ತೂರು: 4 ವರ್ಷಗಳ ಹಿಂದೆ ಉಪ್ಪಿನಂಗಡಿಯ ಮಠದಲ್ಲಿ ನಡೆದ ಲಾರಿ ಮತ್ತು ಆಟೋ ರಿಕ್ಷಾ ನಡುವಿನ ಅಪಘಾತಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕನಿಗೆ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.


2021ರ ನ.29ರಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆರೋಪಿ ಲಾರಿ(ಕೆ.ಎ.35 ಎ 1419)ಯ ಚಾಲಕ ಲೋಕೇಶ್ ಬಿ.ಪಿ ಅವರು ಬೆಂಗಳೂರು
ಕಡೆಯಿಂದ ಮಂಗಳೂರು ಕಡೆಗೆ ಲಾರಿಯನ್ನು ಚಲಾಯಿಸಿಕೊಂಡು ಹೋಗಿ ಉಪ್ಪಿನಂಗಡಿ ಗ್ರಾಮದ ಮಠ ಬಳಿ ಬೇರೆ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಅಜಾಗರುಕತೆಯಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ರಾಂಗ್ ಸೈಡಿಗೆ ಹೋಗಿ ಉಪ್ಪಿನಂಗಡಿಯಿಂದ ಮಠ ಕಡೆಗೆ ಸಿದ್ದಿಕ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ(ಕೆ.ಎ21 ಸಿ 1750)ಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ರಿಕ್ಷಾದಲ್ಲಿದ್ದ ಮಹಮ್ಮದ್ ಅಲ್ತಾಫ್ ಮತ್ತು ಖತೀಬ್ ಎಂಬವರು ಮೃತಪಟ್ಟಿದ್ದರು.ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರು ಆರೋಪಿ ಲಾರಿ ಚಾಲಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.ಆರೋಪಿಗೆ ಐಪಿಸಿ ಸೆಕ್ಷನ್ 279, 338, 304(ಎ), ಅಡಿಯಲ್ಲಿ ಶಿಕ್ಷೆ ಪ್ರಕಟವಾಗಿದ್ದು, ಐಪಿಸಿ ಆ್ಯಕ್ಟ್ 279ರಲ್ಲಿ ರೂ.1 ಸಾವಿರ, 1 ದಿನದ ಸರಳ ಜೈಲುಶಿಕ್ಷೆ, 338ರಲ್ಲಿ 1 ಸಾವಿರ ರೂಪಾಯಿ ದಂಡ ಮತ್ತು 1 ದಿನಗಳ ಸರಳ ಜೈಲು ಶಿಕ್ಷೆ, 304ಎ ಅಡಿ 6 ತಿಂಗಳ ಜೈಲುಶಿಕ್ಷೆ ಹಾಗು 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕರಾದ ಕವಿತಾ ಕೆ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here