ನ.7:ಕೃಷಿ ಯಂತ್ರೋಪಕರಣಗಳ ಮಾರಾಟ, ಸೇವಾ ಸಂಸ್ಥೆಯ ಸಾಯ ಎಂಟರ್ಪ್ರೈಸಸ್ ರವರ 14ನೇ ಶಾಖೆ ಬಂಟ್ವಾಳದಲ್ಲಿ ಶುಭಾರಂಭ

0

ಪುತ್ತೂರು: ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದಿರುವ ಎಪಿಎಂಸಿ ರಸ್ತೆಯಲ್ಲಿ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಸಂಸ್ಥೆಯ ಪ್ರಧಾನ ಸಂಸ್ಥೆಯಾಗಿರುವ ಸಾಯ ಎಂಟರ್ಪ್ರೈಸಸ್ ಇದರ 14ನೇ ಶಾಖೆಯ ಉದ್ಘಾಟನೆಯು ನ. 7 ರಂದು ಬಂಟ್ವಾಳ ಬೈಪಾಸ್ ರಸ್ತೆಯ ಅಜೇಕಳ ಮಹಲ್ತೋಟ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ.


ಪ್ರಗತಿಪರ ಕೃಷಿಕ ಹಾಗೂ ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಉದ್ಯಮಿ ಹಾಗೂ ರೊಟೇರಿಯನ್ ಲೊರೆಟ್ಟೊಪದವಿನ ಅವಿಲ್ ಮಿನೇಜಸ್ ರವರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901497852 ನಂಬರಿಗೆ ಸಂಪರ್ಕಿಸಬಹುದು ಎಂದು ಸಾಯ ಸಮೂಹ ಸಂಸ್ಥೆಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here