ಕಾಣಿಯೂರು: ನೇತ್ರಾವತಿ ತುಳುಕೂಟ ರಾಮಕುಂಜ ಇದರ ನೇತೃತ್ವದಲ್ಲಿ, ತೆಗ್ ರ್ ತುಳುಕೂಟ ನೂಜಿಬಾಳ್ತಿಲ ಇದರ ಆಶ್ರಯದಲ್ಲಿ ಕಡಬ ಕುಟ್ರುಪ್ಪಾಡಿ ಕೇಪು ಶ್ರೀಮಹಾಗಣಪತಿ ಲಕ್ಷ್ಮಿ ಜನಾರ್ದನ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಡಿ.21ರಂದು ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನವು ನಡೆಯಲಿದೆ. ಇದರ ಅಂಗವಾಗಿ ಆಯೋಜಿಸಿರುವ ವಿವಿಧ ಸ್ಪರ್ಧೆಗಳಲ್ಲಿ ಒಂದಾದ ಕುಣಿತ ಭಜನಾ ಸ್ಪರ್ಧೆಯು ಪಿಂಗಾರ ತುಳುಕೂಟ ಕಾಣಿಯೂರು ಮತ್ತು ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನ.9ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
ಕುಣಿತ ಭಜನಾ ಸ್ಪರ್ಧೆಯ ನಿಯಮಗಳು ಮತ್ತು ಸೂಚನೆಗಳು
ಸ್ಪರ್ಧೆಯು 4 ವಿಭಾಗಗಳಲ್ಲಿ ಅಂದರೆ ಪ್ರಾಥಮಿಕ, ಪ್ರೌಢ, ಕಾಲೇಜು (ಪಿಯುಸಿ ಮತ್ತು ಡಿಗ್ರಿ ) ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ನಡೆಸಲಾಗುವುದು. ತುಳು ಭಜನೆಯೇ ಆಗಿರಬೇಕು. ಸ್ಪರ್ಧೆಯಲ್ಲಿ ಕನಿಷ್ಠ 10 ಮಂದಿ, ಗರಿಷ್ಠ 12 ಮಂದಿ ಸದಸ್ಯರು ಇರಬಹುದು. ಹಿಮ್ಮೇಳಕ್ಕೆ ಇತಿಮಿತಿ ಇಲ್ಲ ಮತ್ತು ಅವುಗಳನ್ನು ಅಂಕಗಳಿಗೆ ಪರಿಗಣಿಸುವುದಿಲ್ಲ. ಅವಧಿ ಪ್ರತಿತಂಡಕ್ಕೆ 8 ರಿಂದ 10 ನಿಮಿಷ. ಯಾವುದೇ ಕಾರಣಕ್ಕೂ ಧ್ವನಿಸುರುಳಿ (ಕ್ಯಾಸೆಟ್) ಬಳಸುವಂತಿಲ್ಲ. ಕಡಬ ತಾಲೂಕಿಗೆ ಒಳಪಟ್ಟ ಶಾಲೆಗಳಿಗೆ ಮತ್ತು ಸಾರ್ವಜನಿಕರಿಗೆ ಮಾತ್ರ ಅವಕಾಶ.
ಸ್ಪರ್ಧಿಗಳು ವೇದಿಕೆಗೆ ಪ್ರವೇಶಿಸಿದ ಕೂಡಲೇ ಸಮಯ ಆರಂಭವಾಗುತ್ತದೆ. ಸ್ಪರ್ಧೆಗಳು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ. ಸ್ಪರ್ಧಾಳುಗಳು ದಿನಾಂಕ 8.11.2025 ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ವೇಷಭೂಷಣಕ್ಕೆ ಪ್ರಾಧಾನ್ಯತೆ ಇದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, 9740382578, 9480158629, 9482968769 ಸಂಪರ್ಕಿಸಬಹುದು.
