ಪರಿಸರ ಸ್ನೇಹಿ ಬ್ಯಾಟರಿ ರಿಜನೆರೇಷನ್ ಯಂತ್ರಗಳ ಮಾರಾಟ ಮತ್ತು ಸೇವೆಯ ಅಧಿಕೃತ ಡೀಲರ್
ಪುತ್ತೂರು: ದೇಶಾದ್ಯಂತ ಡೀಲರ್ಗಳನ್ನು ಹೊಂದಿರುವ ಪುಣೆ ಮೂಲದ SunC ಕಂಪನಿಯ ಕರ್ನಾಟಕದ ಏಕೈಕ ಡೀಲರ್ ಮತ್ತು ಪರಿಸರ ಸ್ನೇಹಿ ಬ್ಯಾಟರಿ ರಿಜನರೇಷನ್ ಯಂತ್ರಗಳ ಮಾರಾಟ ಹಾಗೂ ಸೇವೆಗಳ ಡೀಲರ್ ಮನನ್ ಎಂಟರ್ಪ್ರೈಸಸ್ ನ.7 ರಂದು ಪುತ್ತೂರಿನ ಅರುಣಾ ಕಲಾಮಂದಿರದ ಮುಂಭಾಗದಲ್ಲಿರುವ ಕಣ್ಣನ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ.
ಮಾಲಕ ಅರ್ಜುನ್ ಮೂರ್ಜೆ ಅವರ ಪುತ್ರ ಮಾಸ್ಟರ್ ಮನನ್ ಮೂರ್ಜೆ ಎ. ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ದರ್ಬೆ ಸೈಂಟ್ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲ ರೇ| ಡಾ| ಆಂಟನಿ ಪ್ರಕಾಶ್ ಮೊಂತೇರೊ, ಏಷ್ಯನ್ ವುಡ್ಸ್ ಪುತ್ತೂರು ಇದರ ಮಾಲಕ ಕೆ.ಎಂ.ಇಸ್ಮಾಯಿಲ್, ಬ್ಯಾಂಕ್ ಆಫ್ ಬರೋಡಾ ದರ್ಬೆ ಶಾಖೆಯ ಮುಖ್ಯ ವ್ಯವಸ್ಥಾಪಕ ಭರತ್ ಹೆಚ್ ವಿ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಿಮ್ಮ ಮನೆಯಲ್ಲಿ ಇರುವ ಬ್ಯಾಟರಿ ಗುಣಮಟ್ಟ ಕಳೆದುಕೊಂಡಿದ್ದರೆ, ಡೆಡ್ ಆಗಿದ್ದರೆ ಅಥವಾ ಹೊಸ ಬ್ಯಾಟರಿ, ಅದರಲ್ಲೂ ಪರಿಸರ ಸ್ನೇಹಿ ಬ್ಯಾಟರಿ ಖರೀದಿಸುವ ಆಲೋಚನೆಯಲ್ಲಿದ್ದರೆ ನ.7 ರಿಂದ ಮನನ್ ಎಂಟರ್ಪ್ರೈಸಸ್ ನಿಮ್ಮ ಸೇವೆಗಾಗಿ ಕಾರ್ಯನಿರ್ವಹಿಸಲಿದೆ. ಬ್ಯಾಟರಿ ಗುಣಮಟ್ಟ ಕಳೆದುಕೊಂಡಿದ್ದರೆ ಅಥವಾ ಕೆಟ್ಟು ಹೋಗಿದ್ದರೆ ಅಂತಹ ಬ್ಯಾಟರಿಯನ್ನು ಈ ಶಾಪ್ಗೆ ತೆಗೆದುಕೊಂಡು ಹೋದರೆ ರಿಜನರೇಷನ್ ಮಾಡಿ ನೀಡುತ್ತಾರೆ.
ಇಲ್ಲಿ ರಿಜನರೇಷನ್ ಮಾಡಿದ ಬ್ಯಾಟರಿಗಳು ಮತ್ತೆ ಶೇ.90 ರಿಂದ 95 ರಷ್ಟು ಬಾಳಿಕೆ ಬರುತ್ತದೆ. ಅಲ್ಲದೆ, ಬ್ಯಾಟರಿಯ ಗುಣಮಟ್ಟದ ಮೇಲೆ ಮೂರು ತಿಂಗಳಿನಿಂದ ಎರಡು ವರ್ಷಗಳ ವರೆಗೆ ವಾರಂಟಿಯೂ ನೀಡಲಾಗುತ್ತದೆ. ಇದರಿಂದಾಗಿ ಇ-ವೇಸ್ಟ್ ಕಡಿಮೆಯಾಗಿ ಪರಿಸರ ಹಾನಿಯನ್ನೂ ಕಡಿಮೆ ಮಾಡುತ್ತದೆ. ವಿವಿಧ ಕಂಪನಿಗಳ ಬ್ಯಾಟರಿಗಳನ್ನೂ ಇಲ್ಲಿ ಖರೀದಿಸಬಹುದಾಗಿದೆ. ಈ ಎಲ್ಲದರ ಜೊತೆಗೆ ವಾಹನಗಳ ಇನ್ಶೂರೆನ್ಸ್, ಆರೋಗ್ಯ ಇನ್ಶೂರೆನ್ಸ್ ಇತ್ಯಾದಿ ಸೇವೆಗಳೂ ಇಲ್ಲಿ ನೀಡಲಾಗುತ್ತದೆ. ಮನನ್ ಎಂಟರ್ಪ್ರೈಸಸ್ ಮೂಲಕ ರಾಜ್ಯಾದ್ಯಂತ ಸನ್ಸಿ ಕಂಪನಿಯ ಬ್ಯಾಟರಿ ರಿಜನರೇಷನ್ ಯಂತ್ರ ಮಾರಾಟ (RG 16X, RG 8X, RG 4X) ಮತ್ತು ಸರ್ವಿಸ್ಗಳನ್ನು ನೀಡಲಾಗುತ್ತದೆ. ಅಲ್ಲದೆ, ಸ್ವ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಬ್ಯಾಟರಿಗಳ ರಿಜನರೇಷನ್ ವೃತ್ತಿ ಕೈಹಿಡಿಯಲಿದೆ. ಇದಕ್ಕೆ ಬೇಕಾದ ತರಬೇತಿಯನ್ನೂ ಮನನ್ ಎಂಟರ್ಪ್ರೈಸಸ್ನಲ್ಲಿ ನೀಡಲಾಗುತ್ತದೆ. ರಿಜನರೇಷನ್ ಮಾಡುವ ಯಂತ್ರವನ್ನೂ ನೀಡಲಾಗುತ್ತದೆ ಎಂದು ಮನನ್ ಎಂಟರ್ಪ್ರೈಸಸ್ ಮಾಲಕ ಅರ್ಜುನ್ ಮೂರ್ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8296046112/ 9741146112 ಸಂಪರ್ಕಿಸಬಹುದು.
ಲಭ್ಯವಿರುವ ಸೇವೆಗಳು:
- ಬ್ಯಾಟರಿ ರಿಜನೆರೇಷನ್ ಸೇವೆಗಳು
- ಎಲ್ಲಾ ವಿಧದ ಬ್ಯಾಟರಿ ಪರಿಹಾರಗಳು
- ಹೊಸ ಬ್ಯಾಟರಿಗಳು ಮತ್ತು ಇನ್ವರ್ಟರ್ಗಳ ಮಾರಾಟ
- ಎಲ್ಲಾ ವಾಹನಗಳ ಹಾಗೂ ಆರೋಗ್ಯ ವಿಮೆ ಸೇವೆಗಳು
