ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ

0

ವಿವೇಕಾನಂದ ಪಾಲಿಟೆಕ್ನಿಕ್‌ಗೆ 1ಲಕ್ಷ ಠೇವಣಿ- ಕೇಶವ ಪ್ರಸಾದ್ ಮುಳಿಯ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ ವಿವೇಕಾನಂದ ಕ್ಯಾಂಪಸ್‌ನ ಕೇಶವ ಸಂಕಲ್ಪದಲ್ಲಿ ನಡೆಯಿತು. ಅತಿಥಿ, ಮುಳಿಯ ಪ್ರಾಪರ್ಟೀಸ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, “ನಮಗೆ ಆಸಕ್ತಿಯ ವಿಷಯವನ್ನು ನಾವು ಕಲಿಯಬೇಕು. ಕಲಿತ ವಿದ್ಯೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸನ್ನು ಕಾಣಬೇಕು” ಎಂದರು.


“ಒಂದು ಲಕ್ಷ ಠೇವಣಿಯಿಂದ ಬಂದ ಬಡ್ಡಿಯಲ್ಲಿ 5 ಸಾವಿರ ರೂಪಾಯಿಗಳ ಜೊತೆಗೆ ಇನ್ನು 5 ಸಾವಿರ ಸೇರಿಸಿ10 ಸಾವಿರ ರೂಪಾಯಿಗಳನ್ನು ಸಂಸ್ಥೆಯ ಅಭಿವೃದ್ದಿಗೆ ಉಪಯೋಗವಾಗುವ ಹೊಸ ಆವಿಷ್ಕಾರ ಮಾಡುವ ವಿದ್ಯಾರ್ಥಿಗಳಿಗೆ ದತ್ತಿನಿಧಿ ಕೊಡುಗೆಯನ್ನು” ನೀಡುವುದಾಗಿ ಹೇಳಿದರು


ಪ್ರತಿವರ್ಷದಂತೆ ಈ ಬಾರಿ ಕಾಲೇಜಿನ ಅತಿಥಿಯಾಗಿ ಆಗಮಿಸಿದ ಹಿರಿಯ ವಿದ್ಯಾರ್ಥಿ ಡಾ.ಕೃಷ್ಣಪ್ರಕಾಶ ಮಾತನಾಡುತ್ತಾ “ಗುರಿಯೊಂದಿಗೆ ಗುರುವಿನ ಬಲ ಹಾಗೂ ಸಾಧಿಸುವ ಛಲ ಇದ್ದಾಗ ಸಾಧನೆ ಸುಲಭ. ಹಂಸಕ್ಷೀರ ನ್ಯಾಯದಂತೆ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಳಿತಾಗುವಂತೆ ಬಾಳಬೇಕು ” ಎಂದು ಶುಭಹಾರೈಸಿದರು.


ಕಾರ‍್ಯಕ್ರಮದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ಇಂದಿನ ಸಾಧನೆಗಳು ನಿಮ್ಮ ಭವಿಷ್ಯಕ್ಕೆ ಸ್ಪೂರ್ತಿಯಾಗಲಿ ಎಂದರು.
ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ, ಕ್ರೀಡಾಚಟುವಟಿಕೆ, ಶೈಕ್ಷಣಿಕ ಹಾಗೂ ದತ್ತಿನಿಧಿ ಬಹುಮಾನಗಳನ್ನು ಅತಿಥಿಗಳು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿದರು.


ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ, ವಿದ್ಯಾರ್ಥಿ ಕ್ಷೇಮಾಧಿಕಾರಿ ಸುಧಾಕುಮಾರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಶ್ರೀರಾಮ್ ಕೆ.ಎಸ್,ಪ್ರಥಮ್ ಜೆ.,ಪುನೀತ್,ಕವನ್ ರೈ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಅನನ್ಯ ಉಪಸ್ಥಿತರಿದ್ದರು.


ವಿದ್ಯಾರ್ಥಿ ಕ್ಷೇಮಾಧಿಕಾರಿ ರವಿರಾಮ್ ಯಸ್ ಅತಿಥಿಗಳನ್ನು ಪರಿಚಯಿ,ಸಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಮುರಳೀಧರ್ ಯಸ್ ವಾರ್ಷಿಕ ವರದಿ ವಾಚಿಸಿದರು.ಚೈತ್ರ,ಅನ್ವಿತಾ, ರಮ್ಯ ಬಹುಮಾನ ವಿಜೇತರ ಪಟ್ಟಿ ಓದಿದರು. ವಿದ್ಯಾರ್ಥಿ ನಾಯಕ ಶ್ರೀರಾಮ್ ಕೆ.ಎಸ್ ವಂದಿಸಿದರು. ಸುಜನ್ಯಾ ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕರಾದ ವಿನ್ಯಾಸ್ ಹಾಗೂ ಸಹನ ಕಾರ‍್ಯಕ್ರಮ ನಿರೂಪಿಸಿದರು. ಸಭಾಕಾರ‍್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ‍್ಯಕ್ರಮಗಳು ನಡೆದವು.

.

LEAVE A REPLY

Please enter your comment!
Please enter your name here