ಪುತ್ತೂರು: ಮಂಗಳೂರು ಪಡಿ ಮತ್ತು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಇವರ ಸಹಕಾರದಲ್ಲಿ ಪೊಲೀಸ್ ಇಲಾಖೆಯ ಸಹಬಾಗಿತ್ವದಲ್ಲಿ ವಿವಿಧ ಇಲಾಖೆ ಮತ್ತು ಪುತ್ತೂರಿನ ಸಂಘಸಂಸ್ಥೆ ಮೂಲಕ ಓಯಸ್ಸಿಸ್ ಬೆಂಗಳೂರು ಇವರಿಂದ ನಡೆಯುವ ಮಾನವ ಮಾರಾಟ ಮತ್ತು ಕಳ್ಳ ಸಾಗಾಣಿಕೆ ವಿರುದ್ಧ ಜನಜಾಗ್ರತಿ ಕಾರ್ಯಕ್ರಮವು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆಯಿತು.
ಸುಮಾರು 20ರಷ್ಟು ವಿದ್ಯಾರ್ಥಿಗಳು ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಿದರು, ಬಳಿಕ ಬೈಕ್ ರ‍್ಯಾಲಿ ಮೂಲಕ ಹಲವು ವಿದೇಶಿಗರು ಆಗಮಿಸಿದ್ದರು. ಕಾರ್ಯಕ್ರಮವನ್ನು ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಬೂಮಾ ರೆಡ್ದಿ ಉದ್ಘಾಟಿಸಿ ಇಂತಹ ಕಾರ್ಯಕ್ರಮದಿಂದ ಸಮಾಜದಲ್ಲಿ ಆಗುವ ತಪ್ಪುಗಳನ್ನ ತಡೆಯಲು ಅನುಕೂಲ ಆಗುತ್ತದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಮೂಲಕ ಇಂತಹಾ ಅನೇಕ ಕಾರ್ಯಕ್ರಮಗಳನ್ನು ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ, ಉತ್ತಮ ಕಾರ್ಯವನ್ನು ಎಲ್ಲಾ ಸಂಘ ಸಂಸ್ಥೆಯನ್ನು ಸೇರಿ ಮಾಡಿದಾಗ ಯಶಸ್ಸು ಕಾಣುತ್ತದೆ ಎಂದರು.
ಕಾರ್ಯಕ್ರಮದ ವಿವರಣೆಯನ್ನು ಪಡಿ ಮಂಗಳೂರು ಇದರ ಸ್ಥಾಪಕರು, ಕಾರ್ಯನಿರ್ವಹನಾ ಪಾಲಕರಾದ ರೆನ್ನಿ ಡಿ ಸೋಜ಼ಾ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ಼ಾ, ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ, ಮಹಿಳಾ ಠಾಣೆಯ ಎಸ್.ಐ ಸುನೀಲ್ ಕುಮಾರ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ಅದ್ಯಕ್ಷರಾದ ರೊ ಚಂದ್ರಹಾಸ ರೈ.ಬಿ, ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರೇಮಿ ಪೆರ್ನಾಂಡಿಸ್, ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ, ಶಿಕ್ಷಣ ಸಂಪನ್ಮೂಲ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ನಯನ ರೈ, ರೊಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ರೊ ಉಲ್ಲಾಸ್ ಪೈ, ಜೆ.ಜೆ ಬೊರ್ಡ್‌ನ ನ್ಯಾಯವಾದಿ ಶಾಹಿರಾ ಬಾನು, ಸ್ನೇಹ ಸಂಘ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ತಾರನಾಥ ಗೌಡ ಬನ್ನೂರು, ಉಪಾದ್ಯಕ್ಷ ಶಶಿಧರ ಸಿಟಿಗುಡ್ದೆ, ಪಡಿ ಎಡ್ವಕೇಸ್ ಕಸ್ತೂರಿ ಬೊಳ್ವಾರ, ಅಮರ್ ಅಕ್ಬರ್ ಅಂತೋಣಿ ಸಂಘಟನೆಯ ರಝಾಕ್ ಬಪ್ಪಳಿಗೆ, ಪಡಿ ಸಂಸ್ಥೆಯ ನಿರ್ವಾಹಕ ನವೀನ್, ನಗರಸಭಾ ನಾಮ ನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡ್, ಸಾಮಾಜಿಕ ಕಾರ್ಯಕರ್ತ ಅಶೋಕ್ ಬಪ್ಪಳಿಗೆ, ಕಾರ್ಯಕ್ರಮದ ಸಂಘಟಕರಾದ ಲೋಕೇಶ್ ಅಲ್ಮುಡ, ಸಂಪನ್ಮೂಲ ಕೇಂದ್ರದ ನ್ಯಾಯಾವಾದಿ ರಾಜೇಶ್ವರಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು, ಹಲವು ರಿಕ್ಷಾ ಚಾಲಕರು ಉಪಸ್ಥಿತರಿದ್ದರು. ಸಂಪನ್ಮೂಲ ಕೇಂದ್ರದ ನಿಕಟ ಪೂರ್ವ ಅಧ್ಯಕ್ಷೆ ಹರಿಣಾಕ್ಷಿ ಶೆಟ್ಟಿ ನಿರೂಪಿಸಿದರು. ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆ ಸ್ವಾಗತಿಸಿದರು. ಕಾರ್ಯದರ್ಶಿ ಸುಂಮಂಗಳಾ ಶೆಣೈ ವಂದಿಸಿದರು.
