ಪುತ್ತೂರು: ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿರುವ ಕುರಿತು ವರದಿಯಾಗಿದೆ.
ನ.8ರಂದು ಮಧ್ಯಾಹ್ನ, ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾ ಒಂದರಲ್ಲಿ ಪ್ರಸಾದ್ ಎಂಬಾತ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಜನಾರ್ದನ ಕೆ.ಎಂ.ರವರು ಸಿಬ್ಬಂದಿಗಳೊಂದಿಗೆ ತೆರಳಿ ಸದ್ರಿ ಆಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದಾಗ, ಸುಮಾರು 1 ಕೆಜಿಗಿಂತಲೂ ಮೇಲ್ಪಟ್ಟ ಗಾಂಜಾ ಹಾಗೂ ಮಾರಕಾಯುಧವಾದ ಅಂದಾಜು 25 ಇಂಚು ಉದ್ದದ ತಲವಾರು ಪತ್ತೆಯಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 8(ಸಿ),20 (ii) (c) NDPS & ಕಲಂ25(1B),b) Indian Arms Act (106/2025) ಆರೋಪಿ ರಿಕ್ಷಾ ಚಾಲಕ ಸವಣೂರಿನ ಪ್ರಸಾದ್ ನನ್ನು ಪೊಲೀಸರು ಬಂಧಿಸಿ,ಸೊತ್ತು ವಶಪಡಿಸಿಕೊಂಡಿದ್ದಾರೆ.
