1 ನಾಮಪತ್ರ ತಿರಸ್ಕೃತ-ಹಿಂಪಡೆಯಲು ಇಂದು ಕಡೇ ದಿನ
ಪುತ್ತೂರು: ಪ್ರತಿಷ್ಠಿತ ಅಂತರ್ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ರಚನೆಗೆ ನ.23ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ವೇಳೆ ಓರ್ವರ ನಾಮಪತ್ರ ತಿರಸ್ಕೃತಗೊಂಡಿದೆ. ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸಿ ಕ್ಲಾಸ್ ಸಾಮಾನ್ಯ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ವೇಣುಗೋಪಾಲ್ ಎಂಬವರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿದೆ. ಉಳಿದಂತೆ 34 ನಾಮಪತ್ರಗಳೂ ಕ್ರಮಬದ್ಧವಾಗಿವೆ. ನಾಮಪತ್ರ ಹಿಂಪಡೆಯಲು ನ.11ರಂದು ಕಡೆ ದಿನವಾಗಿದೆ.
ಕರ್ನಾಟಕ ರಾಜ್ಯದ 10 ಮತ್ತು ಕೇರಳದಿಂದ 9 ಸೇರಿದಂತೆ ಒಟ್ಟು 19 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಯಾಗಬೇಕಿದೆ. 19 ಸ್ಥಾನಗಳ ಪೈಕಿ 16 ಸ್ಥಾನಗಳು ಸಾಮಾನ್ಯ ಮೀಸಲು ಮತ್ತು ಎರಡು ಸ್ಥಾನ ಮಹಿಳಾ ಮೀಸಲಾಗಿದ್ದು, ಒಂದು ಸ್ಥಾನವನ್ನು ಪ.ಜಾತಿ ಯಾ ಪಂಗಡಕ್ಕೆ ಮೀಸಲಿರಿಸಲಾಗಿದೆ. ಸಾಮಾನ್ಯ 16 ಸ್ಥಾನಗಳಲ್ಲಿ ಎ ಮತ್ತು ಬಿ ದರ್ಜೆಗೆ 4 ಹಾಗೂ ಸಿ ದರ್ಜೆಗೆ 12 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಸಿ ಕ್ಲಾಸ್ನಿಂದ 29 ಹಾಗೂ ಎ.ಬಿ.ಕ್ಲಾಸ್ನಿಂದ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಿ.ಕ್ಲಾಸ್ ಸಾಮಾನ್ಯ ಮೀಸಲು ವಿಭಾಗದಲ್ಲಿ ಕರ್ನಾಟಕದಿಂದ ರಾಮಪ್ರತೀಕ್ ಕೆ., ಎಂ.ಜಿ.ಸತ್ಯನಾರಾಯಣ ಸುಳ್ಯ, ದಯಾನಂದ ಹೆಗ್ಡೆ, ಎಂ.ಮಹೇಶ್ ಚೌಟ, ಪುರುಷೋತ್ತಮ ಭಟ್ ಎಂ., ಎಸ್.ಆರ್.ಸತೀಶ್ಚಂದ್ರ,ಮುರಳೀಕೃಷ್ಣ ಕೆ.ಎನ್., ವಿಷ್ಣುನಾರಾಯಣ ಭಟ್, ಎ.ವಿ.ತೀರ್ಥರಾಮ, ಗಣಪತಿ ಸರ್ವೇಶ್ವರ ಹೆಗ್ಡೆ, ಮಹೇಶ್ ಕುಮಾರ್(ಮಹೇಶ್ ಪುಚ್ಚಪ್ಪಾಡಿ), ತಿಮ್ಮಪ್ಪ ಗೌಡ, ಜನಾರ್ದನ ಭಟ್ ಎ., ರಾಘವ ಎ., ವೇಣುಗೋಪಾಲ್, ಎಸ್ಸಿ,ಎಸ್ಟಿ ಮೀಸಲು ವಿಭಾಗದಿಂದ ಗಣೇಶ್, ಮಹಿಳಾ ಮೀಸಲು ಸ್ಥಾನದಿಂದ ಮಾಲಿನಿಪ್ರಸಾದ್ ಸುಳ್ಯ, ಕಮಲಾ ಭಟ್ ನಾಮಪತ್ರ ಸಲ್ಲಿಸಿದ್ದಾರೆ.
ಕೇರಳ ರಾಜ್ಯದಿಂದ ಸಿ ಕ್ಲಾಸ್ ಸಾಮಾನ್ಯ ಮೀಸಲು ವಿಭಾಗದಿಂದ ಕೆ.ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ., ರಾಮಕೃಷ್ಣ ಸಿ.ಎಂ., ವಿವೇಕಾನಂದ ಗೌಡ ಪಿ., ಕೆ.ಸತ್ಯನಾರಾಯಣಪ್ರಸಾದ್., ರಾಧಾಕೃಷ್ಣನ್ ಕೆ., ಕರುಣಾಕರನ್ ನಂಬಿಯಾರ್ ಕೆ., ಗಣೇಶ್ ಕುಮಾರ್ ಎ., ಶಶಿಭೂಷಣ, ಮಹಿಳಾ ಮೀಸಲು ಸ್ಥಾನದಿಂದ ಸೌಮ್ಯ, ರವಿಕಲಾ ಶೆಟ್ಟಿಯವರು ನಾಮಪತ್ರ ಸಲ್ಲಿಸಿದ್ದಾರೆ.
ಎ ಮತ್ತು ಬಿ ತರಗತಿಯಿಂದ ಕರ್ನಾಟಕ ರಾಜ್ಯದಿಂದ ರಾಘವೇಂದ್ರ ಹೆಚ್.ಎಂ., ವಿಶ್ವನಾಥ ಈಶ್ವರ್ ಹೆಗ್ಡೆ, ತೀರ್ಥಾನಂದ ಡಿ., ಮಂಜುನಾಥ್ ಚಂದ್ರಶೇಖರ್ ಹೆಗ್ಡೆ ಮತ್ತು ಕೇರಳ ರಾಜ್ಯದಿಂದ ವೆಂಕಟ್ರಮಣ ಭಟ್ ವೈ ಮತ್ತು ಪದ್ಮನಾಭ ಪಟ್ಟಾಜೆ ನಾಮಪತ್ರ ಸಲ್ಲಿಸಿದ್ದಾರೆ.
