ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕು ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರ ಹಾಗೂ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರ ನವೆಂಬರ್ ತಿಂಗಳ ಪ್ರಗತಿ ಪರಿಶೀಲನಾ ಸಭೆಯು ನ.10ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ತಾಲ್ಲೂಕು ವಿಕಲ ಚೇತನರ ನೋಡೆಲ್ ಅಧಿಕಾರಿ ಮಂಗಳ ಕಾಳೆ ಅವರ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಬೆಳಿನೆಲೆ ಗ್ರಾಮೀಣಪುನರ್ ವಸತಿ ಕಾರ್ಯಕರ್ತರಾದ ವಿಜಯಕುಮಾರ್ ಎರ್ಕ ಅವರು ನಶ ಮುಕ್ತ ಭಾರತ ಅಭಿಯಾನ ವಿರುದ್ಧ ಕಾರ್ಯಕ್ರಮದ ಪ್ರತಿಜ್ಞಾ ವಿಧಿ ಬೋಧಿಸಿದರು. ಪುತ್ತೂರು ತಾಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ಸೇರಿದಂತೆ ಪುತ್ತೂರು ಹಾಗೂ ಕಡಬ ತಾಲೂಕು ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಡಬ ಪೆರಾಬೆ ಗ್ರಾಮದ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಮುತ್ತಪ್ಪ ಗೌಡ ಸ್ವಾಗತಿಸಿ, ಬಜತ್ತೂರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಐಚಿಂತ ಪ್ರಜ್ವಲ್ ವೇಗಸ್ ಧನ್ಯವಾದಗೈದರು.