ಗಾಂಜಾ ಮಾರಾಟಕ್ಕೆ ಯತ್ನ : ಕರ್ವೇಲ್‌ನ ಯುವಕನ ಬಂಧನ

0

ಉಪ್ಪಿನಂಗಡಿ: ಮಂಗಳೂರು ನಗರದ ರಸ್ತೆ ಬದಿ ಮಾದಕ ವಸ್ತು ಗಾಂಜಾವನ್ನು ಮಾರುತ್ತಿದ್ದ ಬಂಟ್ವಾಳ ತಾಲೂಕು ಬಿಳಿಯೂರು ಕರ್ವೇಲ್‌ನ ಕ್ವಾಟ್ರಸ್ ಹೌಸ್ ನಿವಾಸಿ ಶಬೀರ್ ಎಂಬವರ ಪುತ್ರ ಸಮೀರ್ ಆಲಿಯಾಸ್ ಕರುವೇಲ್ ಸರ್ಮೀ (23) ಎಂಬಾತನನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಕೊಡಿಯಾಲ್‌ಬಲ್‌ನ ಪಿವಿಎಸ್ ಜಂಕ್ಷನ್ ರಸ್ತೆಯಿಂದ ಕೆ.ಎಸ್.ರಾವ್ ರಸ್ತೆಗೆ ಸಂಪರ್ಕಿಸುವ ಕಚ್ಚಾ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಬ್ಯಾಗ್ ಹಿಡಿದುಕೊಂಡು ಈತ ಗಾಂಜಾ ಮಾರಲು ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಪೊಲೀಸರನ್ನು ಕಂಡ ಈತ ಓಡಲು ಪ್ರಯತ್ನಿಸಿದ್ದು, ಆದರೆ ಪೊಲೀಸರು ಈತನನ್ನು ಹಿಡಿದು ವಿಚಾರಿಸಿದಾಗ ಮಾದಕ ವಸ್ತುವಾದ ಗಾಂಜಾ ಈತನ ಬಳಿ ಇರುವುದು ಪತ್ತೆಯಾಯಿತು. ಈತನಿಂದ 46 ಗ್ರಾಂನ 2 ಪ್ಯಾಕೆಟ್, 42 ಗ್ರಾಂನ ಒಂದು ಪ್ಯಾಕೆಟ್, 1.64 ಕೆ.ಜಿ.ಯ ಒಂದು ಪ್ಯಾಕೆಟ್ ಸೇರಿದಂತೆ ಒಟ್ಟು ಅಂದಾಜು 56,700 ರೂ. ಮೌಲ್ಯದ ಗಾಂಜಾ, ಐಫೋನ್, ಡಿಜಿಟಲ್ ತೂಕ ಮಾಪನವನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here